ಕುವೈಟ್: ಸಮುದ್ರದಲ್ಲಿ ಮುಳುಗಿ ಕಿನ್ನಿಗೋಳಿಯ ಯುವಕ ಮೃತ್ಯು
ಈಜಿಪ್ಟ್ ಪ್ರಜೆ ಓರ್ವರು ನೀರು ಪಾಲಾಗುವುದನ್ನು ಕಂಡು ರಕ್ಷಣೆಗೆ ಮುಂದಾಗಿದ್ದರು.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕುವೈಟ್ ದೇಶದ ಸಾಲ್ಮಿಯಾ ಕಡಲತೀರದಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೋರ್ವರ ರಕ್ಷಣೆಗೆ ಮುಂದಾದ ಕಿನ್ನಿಗೋಳಿಯ ಯುವಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಕಿನ್ನಿಗೋಳಿಯ ಮೊಹ್ಮದ್ ಅನೀಸ್(28) ಎಂದು ಗುರುತಿಸಲಾಗಿದೆ. ಗೆಳೆಯರ ಜೊತೆ ಈಜಲು ತೆರಳಿದ್ದ ವೇಳೆ ಈಜಿಪ್ಟ್ ಪ್ರಜೆ ಓರ್ವರು ನೀರು ಪಾಲಾಗುವುದನ್ನು ಕಂಡು ಅವರ ರಕ್ಷಣೆಗೆ ಅನೀಸ್ ಮುಂದಾಗಿದ್ದರು.
ಶನಿವಾರ ರಾತ್ರಿ 8:30ಗೆ ಘಟನೆ ನಡೆದಿದ್ದು, ಕುವೈಟ್ ತೀರ ರಕ್ಷಕ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ.
ಕುವೈಟ್‌ನಲ್ಲಿಯೇ ಮೃತರ ದಫನ್ ನಡೆಯಲಿದೆ.