ಕಾಸರಗೋಡು: ಪೋಕ್ಸೋ ಪ್ರಕರಣ ಆರೋಪಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದು, ಕೋವಿಡ್ ಪರೀಕ್ಷೆಯ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.

ವೆಲ್ಲರಿಕುಂಡು ನಿವಾಸಿ ಶಿಜೊ ದಾಮೋದರನ್(38) ಮೃತ ವ್ಯಕ್ತಿ. ಆಸ್ಪತ್ರೆಯ ಸ್ನಾನಗೃಹದಲ್ಲಿ ಆತ್ಮಹತ್ಯೆಗೈದ ರೀತಿಯಲ್ಲಿ ಶವ ಪತ್ತೆಯಾಗಿದೆ.

ಹದಿನಾರು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಈತನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಈತನನ್ನು ಕಾರಾಗೃಹಕ್ಕೆ ಒಯ್ಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದು, ಪೊಲೀಸರು ಆಸ್ಪತ್ರೆ ತಲುಪುವ ಮೊದಲೇ ಆತ ಆತ್ಮಹತ್ಯೆಗೈದಿದ್ದಾನೆ.

ಈ ಹಿಂದೆ ಬಾಲಕಿಯೋರ್ವಳಿಗೆ ಕಿರುಕುಳ ನೀಡಿದ ಆರೋಪವೂ ಈತನ ಮೇಲಿತ್ತು. ಹಿಂದೆ ಕೂಡ ಈತ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು ಎನ್ನಲಾಗಿದೆ.

Get real time updates directly on you device, subscribe now.