ಸುಳ್ಯ: ಪುತ್ರಿಗೆ ಲೈಂಗಿಕ ದೌರ್ಜನ್ಯಗೈದ ಮದ್ರಸ ಅಧ್ಯಾಪಕ ಸೆರೆ

ಪುತ್ರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೂ ಮೌನವಾಗಿದ್ದ, ಮಾಹಿತಿ ನೀಡದ ತಾಯಿಯ ವಿರುದ್ಧವೂ ಪ್ರಕರಣ.

ಈತನೊಂದಿಗೆ ಪರಿಸರದ ಮೂವರು ಯುವಕರನ್ನೂ ಬಂಧಿಸಿರುವ ಪೊಲೀಸರು ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಸುಳ್ಯ: ಹದಿನಾರರ ಹರಯದ ತನ್ನ ಪುತ್ರಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮದ್ರಸ ಅಧ್ಯಾಪಕನೋರ್ವನನ್ನು ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಗರ್ಭಿಣಿಯಾಗಿದ್ದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಈತನೊಂದಿಗೆ ಪರಿಸರದ ಮೂವರು ಯುವಕರನ್ನೂ ಬಂಧಿಸಿರುವ ಪೊಲೀಸರು ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಪುತ್ರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೂ ಮೌನವಾಗಿದ್ದ, ಮಾಹಿತಿ ನೀಡದ ತಾಯಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಬಾಲಕಿಯ ಮೇಲೆ  ಕೆಲ ವರ್ಷಗಳಿಂದ ಆಕೆಯ ತಂದೆ ಮಾತ್ರವಲ್ಲದೇ ಹಲವು ಮಂದಿ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಮದ್ರಸಾ ಅಧ್ಯಾಪಕ ಹಿಂದೆಯೂ ಪೋಕ್ಸೊ ಸೇರಿದಂತೆ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಈಗ ತೈಕಡಪ್ಪುರ ನಿವಾಸಿಯಾದ ಗೂನಡ್ಕ ಮೂಲದ ಈ  ಉಸ್ತಾದ್ ಎರಡು ವಿವಾಹವಾಗಿದ್ದ. ಈತನ ಲೈಂಗಿಕ ದೌರ್ಜನ್ಯ ಸಹಿಸಲಾಗದೇ ಬಾಲಕಿ ಮಾವನ ಸಹಾಯದಿಂದ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದಳು.

ಸೂಟ್ ಕೇಸ್‌ನಲ್ಲಿ ದನದ ಮಾಂಸ: ಆರೋಪಿ ಬಂಧನ

ಸ್ಕೂಟರ್‌ನಲ್ಲಿ ಸೂಟ್ ಕೇಸ್‌ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪದಲ್ಲಿ ಕಲ್ಲುಮುಟ್ಲು ನಿವಾಸಿ ನಿಸಾರ್(30) ಎಂಬವರನ್ನು ಬಂಧಿಸಲಾಗಿದೆ.

ಗಾಂಧಿ ನಗರದಿಂದ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಆರೋಪಿಯನ್ನು ಸುಳ್ಯ ಜ್ಯೋತಿ ಸರ್ಕಲ್ ಬಳಿ ಪೊಲೀಸರು ಬಂಧಿಸಿದ್ದಾರೆ.

Get real time updates directly on you device, subscribe now.