ಕಾಪು: ವೈದ್ಯೆಯಿಂದ ಬ್ಯಾಂಕ್‌ಗೆ ವಂಚನೆ ಯತ್ನ

ವೈದ್ಯರೊಬ್ಬರ ವಿರುದ್ಧ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸ್ ದೂರು ನೀಡಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕಾಪು: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯೂಕೇಷನ್‌ಗಳಲ್ಲಿ ವೈದ್ಯರಾಗಿ ಮತ್ತು ಪ್ರೊಫೆಸರ್ ಆಗಿ ಕೆಲಸ ಮಾಡುವುದಾಗಿ ಹೇಳಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬ್ಯಾಂಕಿಗೆ ಮೋಸ ಮಾಡಲು ಯತ್ನಿಸಿದ್ದಾರೆ ಎಂದು ವೈದ್ಯರೊಬ್ಬರ ವಿರುದ್ಧ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸ್ ದೂರು ನೀಡಿದ್ದಾರೆ.

ಜುಲೈ3ರಂದು ‘ಬ್ಯಾಂಕ್ ಆಫ್ ಬರೋಡಾ’ ಮೂಡಬೆಟ್ಟು ಶಾಖೆಗೆ ಬಂದ ವೈದ್ಯೆ, ತನ್ನ ಮಾಸಿಕ ವೇತನ 2,66,000 ರೂ. ಎಂದು ಹೇಳಿದ್ದು  ತನಗೆ ವಾಹನ ಖರೀದಿಸಲು 8,80,780/- ರೂಪಾಯಿ ಮೌಲ್ಯದ ವಾಹನಕ್ಕೆ 7,80,000/- ರೂಪಾಯಿ ಸಾಲ ನೀಡಲು ಕೋರಿದ್ದರು. ತನ್ನ ಸಹೋದರನನ್ನು ಪರಿಚಯಿಸಿ ಆತನಿಗೂ ರೂ 18,20,956/- ರೂಪಾಯಿ ಹುಂಡೈ ಕ್ರೈಟಾ  ವಾಹನ ಖರೀದಿಸಲು ರೂಪಾಯಿ 16,00,000 ರೂ ಸಾಲ ಅಗತ್ಯ ಇದೆ ಎಂದು ಹೇಳಿದ್ದರು.

ಬ್ಯಾಂಕ್  ಖಾತೆ ತೆರೆಯಲು ದಾಖಲಾತಿಗಳನ್ನು ಪಡೆದುಕೊಂಡು ಹೋಗಿ ವೇತನ ಸ್ಲಿಪ್ ಹಾಗೂ  ತೆರಿಗೆ ಆದಾಯದ ದಾಖಲೆ ಸಾಲದ ಅರ್ಜಿಯೊಂದಿಗೆ ರೆನಾಲ್ಟ್ ವಾಹನ ವ್ಯಾಪಾರಿಗಳಿಂದ ದರಪಟ್ಟಿ ಸಲ್ಲಿಸಿದ್ದರು. ವೈದ್ಯೆ ಸಾಲದ ಅರ್ಜಿಯೊಂದಿಗೆ ಸಲ್ಲಿಸಿದ ಖಾತೆ ನಂಬ್ರದೊಂದಿಗೆ ಮಣಿಪಾಲ ಅಕಾಡೆಮಿ ಹೈಯರ್ ಎಜ್ಯೂಕೆಷನ್ ರವರ ವೇತನ ಸ್ಲಿಪ್ಗಳನ್ನು ಪರಿಶೀಲಿಸಿದಾಗ ಆಕೆ ಆ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವುದಿಲ್ಲವಾಗಿ  ಇ-ಮೈಲ್  ಮುಖಾಂತರ ದೃಡಪತ್ರವನ್ನು ನೀಡಿದ್ದಾರೆ. ಆದ್ದರಿಂದ ವೈದ್ಯೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬ್ಯಾಂಕಿಗೆ ಮೋಸ ಮಾಡಿ ಸಾಲ ಪಡೆಯುವ ಉದ್ದೇಶದಿಂದ ಸಾಲಕ್ಕೆ ಅರ್ಜಿಸಲ್ಲಿಸಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ವ್ಯವಸ್ಥಾಪಕಿ  ಅಲ್ವಿನಾ ಡಿಸೋಜಾ ಅವರು ನೀಡಿದ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.