ಲೆಜೆಂಡ್ಸ್ ಆಫ್ ಚೆಸ್ ಟೂರ್ನಿ: ವಿಶ್ವನಾಥನ್ ಆನಂದ್‌ಗೆ ಸತತ ನಾಲ್ಕನೇ ಸೋಲು
ಈ ಪಂದ್ಯದ ಮೂಲಕ ಆನಂದ ಮೊದಲ ಪಾಯಿಂಟ್ಸ್ ಪಡೆದಿದ್ದಾರೆ.
ಆನಂದ್ ಮುಂದಿನ ಪಂದ್ಯದಲ್ಲಿ ಹಂಗೇರಿಯ ಪೀಟರ್ ಲೇಕೊ ಎದುರು ಸ್ಪರ್ಧಿಸಲಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಚೆನ್ನೈ: ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯಲ್ಲಿ ವಿಶ್ವ ವಿಖ್ಯಾತ ಭಾರತೀಯ ಚೆಸ್ ಪಟು ವಿಶ್ವನಾಥನ್ ಆನಂದ್ ಅವರು ಸತತ ನಾಲ್ಕನೇ ಸೋಲುಂಡಿದ್ದಾರೆ.
ಶುಕ್ರವಾರ ತಡರಾತ್ರಿ ನೆದರ್‌ಲ್ಯಾಂಡ್ಸ್‌ನ ಅನೀಶ್ ಗಿರಿ ಎದುರು ನಡೆದ ಹಣಾಹಣಿಯಲ್ಲಿ 2-3ರಿಂದ ಆನಂದ್ ಪರಾಭವಗೊಂಡಿದ್ದಾರೆ.
ತೀವೃ ಹಣಾಹಣಿಯಲ್ಲಿ ಮೊದಲ ನಾಲ್ಕು ಸುತ್ತುಗಳು ಡ್ರಾದಲ್ಲಿ ಅಂತ್ಯಗೊಂಡರೂ ಟೈಬ್ರೇಕ್‌ನಲ್ಲಿ ಅನೀಶ್ ಗಿರಿ ವಿಜಯಿಯಾದರು. ಈ ಪಂದ್ಯದ ಮೂಲಕ ಆನಂದ ಮೊದಲ ಪಾಯಿಂಟ್ಸ್ ಪಡೆದಿದ್ದಾರೆ.
ಆನಂದ್ ಮುಂದಿನ ಪಂದ್ಯದಲ್ಲಿ ಹಂಗೇರಿಯ ಪೀಟರ್ ಲೇಕೊ ಎದುರು ಸ್ಪರ್ಧಿಸಲಿದ್ದಾರೆ.