ಸುಬ್ರಹ್ಮಣ್ಯ: ತಂದೆಗೆ ವಿಷ ಹಾಕಿದ ಮಕ್ಕಳು

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ತಂದೆ ಮೇಲೆ ಹಗೆ ಇತ್ತು.

ಕರಾವಳಿ ಕರ್ನಾಟಕ ವರದಿ
ಸುಬ್ರಹ್ಮಣ್ಯ: ಆಹಾರದಲ್ಲಿ ವಿಷ ಬೆರೆಸಿ ತಂದೆಯನ್ನೇ ಹತ್ಯೆಗೈಯಲು ಮಕ್ಕಳು ಯತ್ನಿಸಿದ ಘಟನೆ ಗುತ್ತಿಗಾರು ಬಳಿ ನಾಲ್ಕೂರು ಗ್ರಾಮದ ಅಂಜೇರಿಯಲ್ಲಿ ನಡೆದಿದೆ.

ಹಂದಿ ಮಾಂಸದ ಅಡುಗೆ ಮಾಡಲಾಗಿದ್ದು, ಊಟ ಮಾಡಿದ ಬಳಿಕ ಹೊನ್ನಪ್ಪ ನಾಯ್ಕ ತೀವೃ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಗುರುವಾರ ರಾತ್ರಿ ಹಂದಿ ಮಾಂಸದ ಅಡುಗೆ ಮಾಡಲಾಗಿದ್ದು, ಮನೆಯವರೆಲ್ಲ ಊಟ ಮಾಡಿದ ಬಳಿಕ ಹೊನ್ನಪ್ಪ ನಾಯ್ಕರ ಮಗ ದೇವಿಪ್ರಸಾದ್(33)  ಅಡುಗೆಗೆ ವಿಷ ಬೆರೆಸಿದ್ದು, ಇನ್ನೊಬ್ಬ ಮಗ ಲೋಕೇಶ್(35) ಸಹಕರಿಸಿದ್ದ ಎನ್ನಲಾಗಿದೆ. ಬೆಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗುವ ಹೊನ್ನಪ್ಪ ಅವರು ಹಂದಿ ಮಾಂಸ ತಿಂದ ಕೂಡಲೇ ತೀವೃ ಅಸ್ವಸ್ಥಗೊಂಡಿದ್ದರು.

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ತಂದೆ ಮೇಲೆ ಹಗೆ ಇತ್ತು ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನು ಹೊನ್ನಪ್ಪ ಅವರ ಎರಡನೇ ಪತ್ನಿ ಸವಿತಾ ಅವರು ನೀಡಿದ ದೂರಿನಂತೆ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಹೊನ್ನಪ್ಪ ಅವರ ಮೊದಲನೇ ಪತ್ನಿಯ ಮಕ್ಕಳಾಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಮಗ ಲೋಕೇಶ್ ಹೊನ್ನಪ್ಪ ಅವರ ಮನೆ ಬಳಿಯೇ ಕೊಟ್ಟಿಗೆಯಲ್ಲಿ ನೆಲೆಸಿದ್ದು, ಇನ್ನೊಬ್ಬ ಸುಳ್ಯದ ಗುತ್ತಿಗಾರಿನಲ್ಲಿ ವಾಸವಿದ್ದರು.

ಹೊನ್ನಪ್ಪ ಅವರ ಪುತ್ರಿ ಮನೆಗೆ ಬಂದ ಹಿನ್ನೆಲೆಯಲ್ಲಿ ಹಂದಿ ಮಾಂಸ ತಂದು ಅಡುಗೆ ಮಾಡಲಾಗಿತ್ತು.

Get real time updates directly on you device, subscribe now.