ಉತ್ತರ ಕೊರಿಯಾ: ಮೊದಲ ಶಂಕಿತ ಕೊರೋನಾ ಸೋಂಕು ಪ್ರಕರಣ

ದ.ಕೊರಿಯಾ ಗಡಿ ಸಮೀಪದ ಕೈಸಾಂಗ್ ನಗರ ಸೀಲ್ ಡೌನ್.

ಕರಾವಳಿ ಕರ್ನಾಟಕ ವರದಿ
ಸೋಲ್: ಉತ್ತರ ಕೊರಿಯಾದ ಪ್ರಜೆಯೋರ್ವರಲ್ಲಿ ಕೊರೋನಾ ಸೋಂಕು ಲಕ್ಷಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಈ ವ್ಯಕ್ತಿ ಮತ್ತು ಈತನ ಜೊತೆ ಸಂಪರ್ಕ ಹೊಂದಿದವರನ್ನು ಐದು ದಿನಗಳಿಂದ ಕ್ವಾರಂಟೈನ್ ಮಾಡಲಾಗಿದೆ.

ಸೋಂಕು ತಗುಲಿರುವುದು ದೃಢಪಟ್ಟರೆ ಇದು ಉತ್ತರ ಕೊರಿಯಾದ ಪ್ರಥಮ ಕೋವಿಡ್-19 ಪ್ರಕರಣ ಎಂದು ದಾಖಲಾಗಲಿದೆ.

ಕೆಲವು ವರ್ಷಗಳ ಹಿಂದೆ ದ.ಕೊರಿಯಾಕ್ಕೆ ಪರಾರಿಯಾಗಿದ್ದ ಈತ ಉತ್ತರ ಕೊರಿಯಾದೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ ಎಂದು ಕೊರಿಯಾ ಸುದ್ದಿ ಸಂಸ್ಥೆ ಕೆಸಿ‌ಎನ್‌ಎ ವರದಿ ಮಾಡಿದೆ.

ದ.ಕೊರಿಯಾ ಗಡಿ ಸಮೀಪದ ಕೈಸಾಂಗ್ ನಗರ ಸೀಲ್ ಡೌನ್ ಮಾಡಲಾಗಿದೆ.

Get real time updates directly on you device, subscribe now.