ಕರ್ನಾಟಕ: ಕೋವಿಡ್ ನೆಪದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ

ಪೋರ್ಚುಗೀಸರೊಂದಿಗೆ ಹೋರಾಡಿದ ಮೊದಲ ತುಳುವ ರಾಣಿ ಅಬ್ಬಕ್ಕ ಕುರಿತ ಅಧ್ಯಾಯವನ್ನೂ ತೆಗೆದುಹಾಕಲಾಗಿದೆ.

ಏಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ಸಂಪೂರ್ಣ ಅಧ್ಯಾಯವನ್ನು ಆರನೇ ತರಗತಿಯಿಂದ ಕೈಬಿಡಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ದೇಶ ಮತ್ತು ಮೈಸೂರು ಇತಿಹಾಸದ ಪ್ರಮುಖ ಭಾಗವಾದ ಹೈದರ್ ಅಲಿ ಮತ್ತು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ತೆಗೆದು ಹಾಕಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕೋವಿಡ್ ಕಾರಣದಿಂದ ಸಮಯದ ಕೊರತೆ ನೆಪವೊಡ್ಡಿ ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪಾಠವನ್ನು ಕಿತ್ತು ಹಾಕಲಾಗಿದೆ.

ಪೋರ್ಚುಗೀಸರೊಂದಿಗೆ ಹೋರಾಡಿದ ಮೊದಲ ತುಳುವ ರಾಣಿ ಅಬ್ಬಕ್ಕ ಕುರಿತ ಅಧ್ಯಾಯವನ್ನೂ ತೆಗೆದುಹಾಕಲಾಗಿದೆ.

ಏಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ಸಂಪೂರ್ಣ ಅಧ್ಯಾಯವನ್ನು ಆರನೇ ತರಗತಿಯಿಂದ ಕೈಬಿಡಲಾಗಿದೆ. ಬೌದ್ಧಧರ್ಮ ಮತ್ತು ಜೈನ ಧರ್ಮವನ್ನು ಕಲಿಸಲು ನಿಗದಿಪಡಿಸಿದ ಸಮಯವನ್ನು ಸಹ ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ.

ಶಾತವಾಹನರು, ಕದಂಬರು ಮತ್ತು ಗಂಗರ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ರಜಪೂತರ ಕೊಡುಗೆಗಳು ಪಠ್ಯಪುಸ್ತಕದಲ್ಲಿ ಕೈಬಿಡಲಾಗಿರುವ ಇತರೆ ಪ್ರಧಾನ ವಿಷಯಗಳಾಗಿವೆ.

ಸೆಪ್ಟೆಂಬರ್ 1ರಿಂದ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಲಾಗಿದೆ. 120 ದಿನಗಳಲ್ಲಿಅಗತ್ಯವಾದ ಪಠ್ಯದ ಭಾಗಗಳನ್ನು ಕಲಿಸಲು 6 ರಿಂದ 10 ನೇ ತರಗತಿಗಳ ಸಮಾಜ  ವಿಜ್ಞಾನ ಶಿಕ್ಷಕರಿಗೆ ಒಂದು ಕೈಪಿಡಿಯನ್ನು ಕೆಟಿಬಿಎಸ್ ಬಿಡುಗಡೆ ಮಾಡಿದೆ. ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪಾಠವನ್ನು ಕಿತ್ತು ಹಾಕಲು ಕೋವಿಡ್ ಕಾರಣದಿಂದ ಸಮಯದ ಕೊರತೆ ನೆಪವೊಡ್ಡಲಾಗಿದೆ.

 

 

 

Get real time updates directly on you device, subscribe now.