ಖಳ ನಾಯಕಿಯಾಗಿ ನಟಿಸುವ ಆಸೆ: ಪ್ರಿಯಾಮಣಿ

ಪ್ರಿಯಾಮಣಿ ‘ವಿರಾಟ್ ಪರ್ವಂ’ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಪಡೆಯಪ್ಪ’  ಚಿತ್ರದಲ್ಲಿ ’ ರಮ್ಯ ಕೃಷ್ಣ ನಟಿಸಿದ್ದ ‘ನೀಲಾಂಬರಿ’ ಯಂತಹ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಬೇಕೆಂದು ಆಸೆ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:  ಬಹುಭಾಷಾ ನಟಿ, ‘ಪರುಥೀವೀರನ್’ ತಮಿಳು ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಮುಡಿಗೇರಿಸಿಕೊಂಡ ನಟಿ ಪ್ರಿಯಾಮಣಿ ತನಗೆ ಖಳನಾಯಕಿ ಪಾತ್ರದಲ್ಲಿ ನಟಿಸುವ ಆಸೆ ಎಂದಿದ್ದಾರೆ. ಸಂಭಾವನೆಗಿಂತ ಒಳ್ಳೆಯ ಪಾತ್ರದಲ್ಲಿ ನಟಿಸುವುದೇ ತಮ್ಮ ಗುರಿ ಎಂದಿದ್ದಾರೆ. ಪ್ರೇಕ್ಷಕರಿಗೆ ರಂಜನೆ ನೀಡುವುದೇ ಆದ್ಯತೆ ಎಂದಿದ್ದಾರೆ.

‘ಪಡೆಯಪ್ಪ’  ಚಿತ್ರದಲ್ಲಿ ’ ರಮ್ಯ ಕೃಷ್ಣ ನಟಿಸಿದ್ದ ‘ನೀಲಾಂಬರಿ’ ಯಂತಹ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಬೇಕೆಂದು ಬಹಳ ದಿನಗಳಿಂದಲೂ ಕಾಯುತ್ತಿರುವುದಾಗಿ ಹೇಳಿದ್ದಾರೆ. ಪೂರ್ಣ ಪ್ರಮಾಣದ ಹಾಸ್ಯ ಪಾತ್ರದಲ್ಲಿ ನಟಿಸುವ ಆಸೆಯೂ ಇದೆಯಂತೆ.

ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ರೂಪಸಿ ಪ್ರಿಯಾಮಣಿ ‘ವಿರಾಟ್ ಪರ್ವಂ’ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕಂಗಲಾಲ್ ಕೈಧು ಸೇ’ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಪರಿಚಯವಾದ ಪ್ರಿಯಾಮಣಿ, ಲಾಕ್‌ಡೌನ್ ದಿನಗಳಲ್ಲಿ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ.

ಪ್ರಸ್ತುತ ಟಿವಿ ಕಾರ್ಯಕ್ರಮಗಳಲ್ಲಿ  ಪ್ರಿಯಾಮಣಿ  ವ್ಯಸ್ತರಾಗಿದ್ದಾರೆ.

Get real time updates directly on you device, subscribe now.