ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜಾ, ವೈದ್ಯೆ ಪತ್ನಿಗೆ ಕೊರೋನಾ

ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಅವರ ಜೊತೆ ಬಿಷಪ್ ಹೌಸ್, ಕುದ್ರೋಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಐವನ್ ಭೇಟಿ ನೀಡಿದ್ದರು.

ಜಿಲ್ಲಾಡಳಿತ ಐವನ್ ಜೊತೆಗಿದ್ದ ಹಲವರಿಗೆ ಕ್ವಾರಂಟೈನ್ ಮಾಡಬಹುದಾಗಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ ಮತ್ತು ಅವರ ಪತ್ನಿ, ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿರುವ ಕವಿತಾ ಡಿ’ಸೋಜ ಇಬ್ಬರಿಗೂ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಾವುದೇ ಲಕ್ಷಣಗಳಿಲ್ಲದಿದ್ದರೂ ನಾವಾಗಿಯೇ ಕೊರೋನಾ ಸೋಂಕು ಮಾಡಿಕೊಂಡಿದ್ದೇವೆ. ಕೊರೋನಾ ಸೋಂಕು ದೃಢಪಟ್ಟಿದೆ. ನಮಗಾಗಿ ನಿಮ್ಮ ಹಾರೈಕೆಗಳು, ಆಶೀರ್ವಾದ ಇರಲಿ ಎಂದು ಐವನ್ ಕೋರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಅವರ ಜೊತೆ ಬಿಷಪ್ ಹೌಸ್, ಕುದ್ರೋಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಐವನ್ ಭೇಟಿ ನೀಡಿದ್ದರು. ಕಂಕನಾಡಿಯಲ್ಲಿ ಆಟೋ ಚಾಲಕರಿಗೆ, ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದರು. ಈ ಸಂದರ್ಭ ಜೊತೆಗಿದ್ದ ಕಾಂಗ್ರೆಸ್ ಮುಖಂಡರಿಗೂ ಸೋಂಕು ಹರಡಿರುವ ಆತಂಕ ಉಂಟಾಗಿದೆ. ಈ ಹಿನ್ನೇಲೆಯಲ್ಲಿ ಜಿಲ್ಲಾಡಳಿತ ಐವನ್ ಜೊತೆಗಿದ್ದ ಹಲವರಿಗೆ ಕ್ವಾರಂಟೈನ್ ಮಾಡಬಹುದಾಗಿದೆ.

 

Get real time updates directly on you device, subscribe now.