ಕುವೈಟ್: ಭಾರತ ಸೇರಿ 31ದೇಶಗಳಿಗೆ ವಿಮಾನ ಸಂಚಾರ ನಿಷೇಧ
ಕುವೈಟ್‌ನಲ್ಲಿರುವ ಲಾಕ್‌ಡೌನ್ ಸಂತ್ರಸ್ತರನ್ನು ತರುವ ದಿಸೆಯಲ್ಲಿ ಕುವೈಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಶುಕ್ರವಾರ ಭಾರತೀಯ ಅಧಿಕಾರಿಗಳು ಹೇಳಿದ್ದರು.
ಕುವೈಟ್ ಹೊಸ ಆದೇಶದಿಂದ ಲಾಕ್‌ಡೌನ್ ಸಂತ್ರಸ್ತರಿಗೆ ತೊಂದರೆಯಾಗಬಹುದು ಎಂಬ ಆತಂಕ.
ಕರಾವಳಿ ಕರ್ನಾಟಕ ವರದಿ
ಕುವೈಟ್: ಕೊರೋನಾ ಸೋಂಕು ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ 31ದೇಶಗಳಿಗೆ ವಾಣಿಜ್ಯ ವಿಮಾನಯಾನವನ್ನು ನಿಷೇಧಿಸಲಾಗಿದೆ.
ಇಟಲಿ, ಸಿಂಗಾಪುರ, ಸ್ಪೈನ್, ಇಟಲಿ, ಹಾಂಗ್‌ಕಾಂಗ್, ಚೀನಾ, ಶ್ರೀಲಂಕಾ, ಮೆಕ್ಸಿಕೊ, ಫಿಲಿಫ್ಫೀನ್ಸ್, ಬಾಂಗ್ಲಾದೇಶ, ಇಂಡೋನೇಷ್ಯಾ, ನೇಪಾಳ, ಪಾಕಿಸ್ತಾನ, ಈಜಿಪ್ಟ್, ಇರಾನ್, ಬ್ರೆಝಿಲ್, ಕೊಲಂಬಿಯಾ ,ಚಿಲಿ ಮುಂತಾದ ದೇಶಗಳು ಈ ಪಟ್ಟಿಯಲ್ಲಿ ಸೇರಿವೆ. ಇವುಗಳನ್ನು ‘ಹೈ ರಿಸ್ಕ್’ ದೇಶಗಳು ಎಂದು ಕುವೈಟ್ ಪರಿಗಣಿಸಿದೆ.
ಕುವೈಟ್‌ನಲ್ಲಿರುವ ಲಾಕ್‌ಡೌನ್ ಸಂತ್ರಸ್ತರನ್ನು ತರುವ ದಿಸೆಯಲ್ಲಿ(ಆಗಮನ/ನಿರ್ಗಮನ) ಕುವೈಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಶುಕ್ರವಾರ ಭಾರತೀಯ ಅಧಿಕಾರಿಗಳು ಹೇಳಿದ್ದರು. ಕುವೈಟ್ ಹೊಸ ಆದೇಶದಿಂದ ಲಾಕ್‌ಡೌನ್ ಸಂತ್ರಸ್ತರಿಗೆ ತೊಂದರೆಯಾಗಬಹುದು ಎಂಬ ಆತಂಕವಿದ್ದರೂ ಈ ಬಗ್ಗೆ ಇನ್ನೂ ಕುವೈಟ್ ಅಧಿಕೃತ ಹೇಳಿಕೆ ನೀಡಿಲ್ಲ.