ದಲಿತರು ಮತ್ತು ಹಿಂದುಳಿದವರು ರಾಮಮಂದಿರಕ್ಕಾಗಿ ಹೋರಾಟ ಮಾಡಿದರು: ಪ್ರಧಾನಿ ನರೇಂದ್ರ ಮೋದಿ
ಬೆಳಿಗ್ಗೆ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸರಯೂ ನದಿಗೆ ಪೂಜೆ ಸಲ್ಲಿಸಿದ್ದರು.
ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸಗೈದ ಪ್ರಧಾನಿ ಮೋದಿ.
ಕರಾವಳಿ ಕರ್ನಾಟಕ ವರದಿ
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಮೋದಿ ಮಾತನಾಡುತ್ತಿದ್ದು, ಇದು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ಎಂದರು. ಹಲವರ ಬಲಿದಾನದಿಂದ ಇದು ಸಾಧ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಮಹತ್ತರ ಕಾರ್ಯಕ್ಕೆ ಸ್ಪಂದಿಸಿದ್ದಾನೆ. ದಲಿತರು ಮತ್ತು ಹಿಂದುಳಿದವರು ರಾಮಮಂದಿರಕ್ಕಾಗಿ ಹೋರಾಟ ಮಾಡಿದರು ಎಂದರು. ಶ್ರೀ ರಾಮ ಎಲ್ಲ ಕಾಲಕ್ಕೂ ಎಲ್ಲರನ್ನೂ ಪ್ರಭಾವಿಸಿದ್ದಾನೆ ಎಂದರು.
ಐದು ಇಟ್ಟಿಗೆಗಳನ್ನು ಬಳಸಿ ಶಿಲಾನ್ಯಾಸಗೈದರು. ಭೂಮಿ ಪೂಜೆಗೆ ಬಳಸುವ ಗುದ್ದಲಿಗೆ ಪೂಜೆ ಸಲ್ಲಿಸಲಾಗಿತ್ತು. ಆರತಿ ಬೆಳಗಿದ ಮೋದಿ ಭೂಮಿಪೂಜೆಗೆ ನಿಗದಿಪಡಿಸಿದ ಸ್ಥಳಕ್ಕೆ ಪ್ರದಕ್ಷಿಣೆ ಬಂದರು.
ಬೆಳಿಗ್ಗೆ 11:45ಕ್ಕೆ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸರಯೂ ನದಿಗೆ ಪೂಜೆ ಸಲ್ಲಿಸಿದ್ದರು.