ಅಯೋಧ್ಯೆಯಂತೆ ಮಥುರಾ, ಕಾಶಿಯಲ್ಲೂ ಮಸೀದಿ ತೆರವುಗೊಳಿಸಬೇಕು: ಸಚಿವ ಈಶ್ವರಪ್ಪ

ಕಾಶಿ ವಿಶ್ವನಾಥ, ಮಥುರಾ ಶ್ರೀಕೃಷ್ಣ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ತೆರಳಿದರೆ ಹಿಂದೂಗಳ ಗುಲಾಮತನ ಭಾಸವಾಗುತ್ತದೆ.

ಗುಲಾಮಗಿರಿ ಸಂಕೇತವಾದ ಅಯೋಧ್ಯೆ ಮಸೀದಿ ತೆರವುಗೊಳಿಸಿದಂತೆ ಅಲ್ಲಿನ ಮಸೀದಿಗಳನ್ನು ತೆರವುಗೊಳಿಸಬೇಕಿದೆ.

ಕರಾವಳಿ ಕರ್ನಾಟಕ ವರದಿ
ಶಿವಮೊಗ್ಗ: ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧರ್ಮಸಭೆಯಲ್ಲಿ ಇಂದು ಮಾತಾಡಿದ ಸಚಿವ ಈಶ್ವರಪ್ಪ ಅಯೋಧ್ಯೆಯಂತೆ ಮಥುರಾ, ಕಾಶಿಯಲ್ಲೂ ಮಸೀದಿ ತೆರವುಗೊಳಿಸಬೇಕು. ಕಾಶಿ ವಿಶ್ವನಾಥ, ಮಥುರಾ ಶ್ರೀಕೃಷ್ಣ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ತೆರಳಿದರೆ ಹಿಂದೂಗಳ ಗುಲಾಮತನ ಭಾಸವಾಗುತ್ತದೆ ಎಂದು ಹೇಳಿದ್ದಾರೆ.

ಭಕ್ತಿಯಿಂದ ಪೂಜೆ ಸಲ್ಲಿಸಲಾಗದಂಥ ಪರಿಸ್ಥಿತಿ ಇದೆ. ಅಲ್ಲಿನ ಮಸೀದಿಗಳು ಅಂಥ ಮನಸ್ಥಿತಿ ಬಿಂಬಿಸುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಗುಲಾಮಗಿರಿ ಸಂಕೇತವಾದ ಅಯೋಧ್ಯೆ ಮಸೀದಿ ತೆರವುಗೊಳಿಸಿದಂತೆ ಅಲ್ಲಿನ ಮಸೀದಿಗಳನ್ನು ತೆರವುಗೊಳಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Get real time updates directly on you device, subscribe now.