‘ಗೌತಮ ಬುದ್ದ ನೇಪಾಳದಲ್ಲೇ ಹುಟ್ಟಿದ್ದ ಎಂಬುದರಲ್ಲಿ ಸಂಶಯವಿಲ್ಲ’: ಭಾರತದ ಸ್ಪಷ್ಟನೆ
ಐತಿಹಾಸಿಕ ಮತ್ತು ಪುರಾತತ್ವ ದಾಖಲೆಗಳು ಗೌತಮ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದ್ದ ಎಂದು ಸಾಬೀತುಪಡಿಸಿದ್ದು ಇದು ನಿರಾಕರಿಸಲಾಗದ ಸಂಗತಿಯಾಗಿದೆ ಎಂದಿದೆ ನೇಪಾಳ.
‘ಬುದ್ಧ ಭಾರತೀಯ’ ಹೇಳಿಕೆ ವಿರುದ್ಧ ನೇಪಾಳ ತೀವೃ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಭಾರತ ಸ್ಪಷ್ಟನೆ ನೀಡಿದೆ.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ವೆಬಿನಾರ್ ಒಂದರಲ್ಲಿ ಮಾತಾಡುತ್ತಿದ್ದ ಸಂದರ್ಭ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ‘ಬುದ್ಧ ಭಾರತೀಯ’ ಎಂದು ಹೇಳಿಕೆ ನೀಡಿದ್ದರ ವಿರುದ್ಧ ನೇಪಾಳ ತೀವೃ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಭಾರತ ಸ್ಪಷ್ಟನೆ ನೀಡಿದೆ. ಕೇಂದ್ರ ಸರಕಾರವು ಗೌತಮ ಬುದ್ಧ ನೇಪಾಳದಲ್ಲೇ ಹುಟ್ಟಿದ್ದ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಕ್ಷಣ ನೇಪಾಳಕ್ಕೆ ಸ್ಪಷ್ಟನೆ ನೀಡಿದೆ.
ಐತಿಹಾಸಿಕ ಮತ್ತು ಪುರಾತತ್ವ ದಾಖಲೆಗಳು ಗೌತಮ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದ್ದ ಎಂದು ಸಾಬೀತುಪಡಿಸಿದ್ದು ಇದು ನಿರಾಕರಿಸಲಾಗದ ಸಂಗತಿಯಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತದ ಪ್ರಧಾನಿ ಮೋದಿಯವರು ನೇಪಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಸಂಸತ್ನಲ್ಲಿ ಮಾತಾಡಿದಾಗ ವಿಶ್ವದ ಶಾಂತಿ ಪ್ರಚಾರಕ ಬುದ್ಧ ಹುಟ್ಟಿದ ನಾಡು ಇದೆಂದು ಹೇಳಿದ್ದರು ಎಂಬುದನ್ನು ನೇಪಾಳ ಭಾರತಕ್ಕೆ ನೆನಪಿಸಿದೆ.
ನೇಪಾಳದ ತೀವೃ ವಿರೋಧದ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ವೆಬಿನಾರ್ನಲ್ಲಿ ನಮ್ಮ ಬೌಧ್ಹಿಕ ಪರಂಪರೆ ಎಂಬ ಉಲ್ಲೇಖದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.