ಎರಡು ವರ್ಷಗಳಲ್ಲಿ ಕೋವಿಡ್-19 ಸಂಪೂರ್ಣ ನಿರ್ಮೂಲನೆ: ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್-19 ತಡೆಯಲು ಬೇಕಾದ ತಂತ್ರಜ್ಞಾನ ನಮ್ಮ ಬಳಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘1918ರಲ್ಲಿ ಇಡೀ ವಿಶ್ವವನ್ನು ಕಾಡಿದ್ದ ಸ್ಪ್ಯಾನಿಶ್ ಫ್ಲೂ ಸಹ ಎರಡು ವರ್ಷಗಳಲ್ಲಿ ಅಂತ್ಯವಾಗಿತ್ತು.’

ಕರಾವಳಿ ಕರ್ನಾಟಕ ವರದಿ
ಜಿನೀವಾ: ಮುಂದಿನ ಎರಡು ವರ್ಷಗಳ ಒಳಗಾಗಿ ವಿಶ್ವದಲ್ಲಿ ಕೊರೋನಾ ಸೋಂಕು ಹಾವಳಿ ಸಂಪೂರ್ಣ ನಿವಾರಣೆಯಾಗಲಿದೆ ಎಂಬ ವಿಶ್ವಾಸವನ್ನು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್ ವ್ಯಕ್ತಪಡಿಸಿದ್ದಾರೆ.

1918ರಲ್ಲಿ ಇಡೀ ವಿಶ್ವವನ್ನು ಕಾಡಿದ್ದ ಸ್ಪ್ಯಾನಿಶ್ ಫ್ಲೂ ಸಹ ಎರಡು ವರ್ಷಗಳಲ್ಲಿ ಅಂತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.

ಅಧಿಕ ತಂತ್ರಜ್ಞಾನ ಮತ್ತು ಸಂಪರ್ಕದಿಂದಾಗಿ ಕೋವಿಡ್ ಸೋಂಕು ಹರಡುವ ಸಾಧ್ಯತೆ ಅಧಿಕ. ಅದು ಹೆಚ್ಚು ವೇಗವಾಗಿ ಹರಡಬಲ್ಲದು. ಆದರೆ ಅದನ್ನು ತಡೆಯಲು ಬೇಕಾದ ತಂತ್ರಜ್ಞಾನ  ಕೂಡ ನಮ್ಮ ಬಳಿ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

Get real time updates directly on you device, subscribe now.