ಬಸ್ಸಿನಡಿ ಸಿಲುಕಿದ ಗರ್ಭಿಣಿ ನರ್ಸ್ ದಾರುಣ ಸಾವು

ಬೆಳಿಗ್ಗೆ ಬಸ್ ಹತ್ತುವ ಸಂದರ್ಭ ಸೀರೆ ಸಿಲುಕಿ ಬಸ್ಸಿನಡಿ ಬಿದ್ದರು ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಬಸ್ ಏರಲು ಯತ್ನಿಸುತ್ತಿದ್ದ ಸಂದರ್ಭ ಬಸ್ಸಿನಡಿ ಬಿದ್ದ ಗರ್ಭಿಣಿ ನರ್ಸ್ ಓರ್ವರು ಸಾವಪ್ಪಿದ ದಾರುಣ ಘಟನೆ ಪೆರವೂರ್‌ನಲ್ಲಿ ವರದಿಯಾಗಿದೆ. ಕಣ್ಣೂರಿನ (Aster MIMS) ಆಸ್ಪತ್ರೆಯ ದಾದಿ ದಿವ್ಯಾ(26) ಎಂದು ಮೃತರನ್ನು ಗುರುತಿಸಲಾಗಿದೆ.

ದಿವ್ಯಾ ವಿನು ಎಂಬವರ ಪತ್ನಿಯಾಗಿದ್ದು, ಆರು ತಿಂಗಳ ಗರ್ಭಿಣಿಯಾಗಿದ್ದರು.

ಬೆಳಿಗ್ಗೆ ಬಸ್ ಹತ್ತುವ ಸಂದರ್ಭ ಸೀರೆ ಸಿಲುಕಿ ಬಸ್ಸಿನಡಿ ಬಿದ್ದರು ಎನ್ನಲಾಗಿದೆ.

 

 

Get real time updates directly on you device, subscribe now.