ನಟಿ ಕಂಗನಾ ರಾನಾವತ್‌ ಡ್ರಗ್ಸ್ ನಂಟಿನ ತನಿಖೆಗೆ ಮಹಾರಾಷ್ಟ್ರ ಸರಕಾರ ಆದೇಶ

ಕಂಗನಾ ತಾನು ಮಾದಕ ದ್ರವ್ಯ ವ್ಯಸನಿಯಾಗಿದ್ದೆ ಎಂದು ಹೇಳಿದ್ದ ವೀಡೀಯೋಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿವೆ.

ಗೆಳೆಯ ಅಧ್ಯಾಯನ್ ಸುಮನ್, ಕಂಗನಾ ನಿಷೇಧಿತ ನಾರ್ಕೊಟಿಕ್ ಡ್ರಗ್ ಸೇವಿಸುತ್ತಿದ್ದು, ನನಗೂ ಸೇವಿಸುವಂತೆ ಒತ್ತಾಯಿಸುತ್ತಿದ್ದರು ಎಂದಿದ್ದರು.

ಕರಾವಳಿ ಕರ್ನಾಟಕ ವರದಿ
ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಅವರ ಡ್ರಗ್ಸ್ ನಂಟಿನ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ನಟ ಶೇಖರ್ ಸುಮನ್ ಪುತ್ರ ಅಧ್ಯಾಯನ್ ಸುಮನ್ 2016ರಲ್ಲಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ನಿಷೇಧಿತ ನಾರ್ಕೊಟಿಕ್ ಡ್ರಗ್ ಸೇವಿಸುತ್ತಿದ್ದು, ನನಗೂ ಸೇವಿಸುವಂತೆ ಒತ್ತಾಯಿಸುತ್ತಿದ್ದರು, 2008ರಲ್ಲಿ ಪಾರ್ಟಿಯೊಂದರಲ್ಲಿ ಡ್ರಗ್ ಸೇ ವಿಸುವಂತೆ ನನಗೆ ಒತ್ತಾಯಿಸಿದ್ದರೂ ನಾನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕಂಗನಾ ಅವರೇ ತಾನು ಮಾದಕ ದ್ರವ್ಯ ವ್ಯಸನಿಯಾಗಿದ್ದೆ ಎಂದು ಹೇಳಿದ್ದ ವೀಡೀಯೋಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ನಟಿಯ ಡ್ರಗ್ಸ್ ನಂಟಿನ ತನಿಖೆಗೆ ಆದೇಶಿಸಿದೆ.

ಮುಂಬೈಯ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಕಚೇರಿಯನ್ನು ಧ್ವಂಸ ಮಾಡಲು ಹೊರಟ ಮಹಾ ಸರ್ಕಾರಕ್ಕೆ ಹೈಕೋರ್ಟ್ ತಡೆ ತಂದ ನಂತರ ಅದು ಅರ್ಧಕ್ಕೆ ನಿಂತಿತ್ತು. ಕಂಗನಾ ಉದ್ದವ್ ಠಾಕ್ರೆಯವರನ್ನು ಏಕವಚನದಲ್ಲಿ ‘ಉದ್ಧವ್ ಠಾಕ್ರೆ, ತುಝೆ ಕ್ಯಾ ಲಗ್ತಾ ಹೈ?’ ಎಂದು ನಿಂದಿಸಿರುವುದು ಸರಕಾರದ ಕಣ್ಣು ಕೆಂಪಗಾಗಿಸಿದೆ. ಇದೀಗ ನಟಿ ಕಂಗನಾರ ಡ್ರಗ್ಸ್ ನಂಟಿನ ತನಿಖೆಗೆ ಸರ್ಕಾರ ನಿರ್ಧರಿಸಿದೆ.

ಈ ನಡುವ ನಟಿಯ ಮಾಜಿ ಗೆಳೆಯ ಅಧ್ಯಾಯನ್ ಸುಮನ್ ಡ್ರಗ್ಸ್ ವಿವಾದದಲ್ಲಿ ತನ್ನನ್ನು ಪುನ: ಎಳೆಯದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡೀಯೋ ಮೂಲಕ ಕೋರಿದ್ದಾರೆ. ಈ ಸಂದರ್ಶನ ಪ್ರಕಟಗೊಂಡ ಸಂದರ್ಭದಲ್ಲಿ ತಾನು ಮತ್ತು ಕುಟುಂಬ ರಾಷ್ಟ್ರೀಯ ಟಿವಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದೆವು. ನನ್ನ ಹಳೆಯ ಕಹಿ ನೆನಪುಗಳನ್ನು, ಜೀವನದ ಹಳೆ ಅಧ್ಯಾಯ ಮರೆಯಲು ಬಯಸುತ್ತೇನೆ ಎಂದಿದ್ದಾರೆ.

 

 

Get real time updates directly on you device, subscribe now.