ಗವಾಸ್ಕರ್ ಟೀಕೆ ವಿರುದ್ಧ ಅನುಷ್ಕಾ ಶರ್ಮ ಆಕ್ರೋಶ

ಗವಾಸ್ಕರ್ ಅವರೆ, ನಿಮ್ಮ ಮಾತು ಅಸಹ್ಯಕರ. ಪತಿಯ ಆಟಕ್ಕೆ ಪತ್ನಿಯನ್ನು ಏಕೆ ಎಳೆದುತರುತ್ತೀರಾ?

“Ab joh lockdown tha to sirf Anushka ki bowling ki practice ki unhone, wo video dekhi hai, usse to kuch nahi hona hai ಎಂದಿದ್ದರು ಗವಾಸ್ಕರ್.

ಕರಾವಳಿ ಕರ್ನಾಟಕ ವರದಿ
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ನಿರೂಪಕ ಸುನಿಲ್ ಗವಾಸ್ಕರ್ ಅವರ ಟೀಕೆಯ ವಿರುದ್ಧ ನಟಿ ಅನುಷ್ಕಾ ಶರ್ಮಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ನಟಿ ಅನುಷ್ಕಾ ಶರ್ಮ, ಗವಾಸ್ಕರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ಗವಾಸ್ಕರ್ ಅವರೆ, ನಿಮ್ಮ ಮಾತು ಅಸಹ್ಯಕರ. ಪತಿಯ ಆಟಕ್ಕೆ ಪತ್ನಿಯನ್ನು ಏಕೆ ಎಳೆದುತರುತ್ತೀರಾ? ನನ್ನ ಬಗ್ಗೆ ನೀವು ಹೇಳಿಕೆ ನೀಡಲು ಏಕೆ ಯೋಚಿಸಿದ್ದೀರಿ ಎಂಬುದನ್ನು ವಿವರಿಸಬೇಕು.  ವೀಕ್ಷಕ ವಿವರಣೆ ಸಂದರ್ಭ ಕ್ರಿಕೆಟಿಗರ ಖಾಸಗಿ ಬದುಕನ್ನು ನೀವು ಗೌರವಿಸಿದ್ದೀರಿ ಎಂದು ನಾನು ಭಾವಿಸಿರುವೆ. ನನಗೂ, ನಮಗೂ ಅದೇ ಗೌರವ ಸಲ್ಲಬೇಕೆಂದು ಅನಿಸುವುದಿಲ್ಲವೇಕೆ ಎಂದು ಪ್ರಶ್ನಿಸಿರುವ ಅನುಷ್ಕಾ, ಕ್ರಿಕೆಟ್‌ ವಿಚಾರಕ್ಕೆ ನನ್ನನ್ನು ಎಳೆದು ತರುವುದನ್ನು ಮೊದಲು ನಿಲ್ಲಿಸಿ ಎಂದಿದ್ದಾರೆ.

ಗವಾಸ್ಕರ್ ಅವರೇ ನೀವೊಬ್ಬ ದಂತಕಥೆ. ಈಗ ಕೂಡ ನೀವು ಈ ಆಟದಲ್ಲಿ ಎತ್ತರದಲ್ಲಿ ಇರುವವರು. ನೀವು ಇಂಥ ಮಾತುಗಳನ್ನು ಹೇಳಿದಾಗ ನನಗೆ ಅನಿಸಿದ್ದನ್ನು ಹೇಳಬೇಕೆನಿಸಿತು ಎಂದಿದ್ದಾರೆ.

ಕಿಂಗ್ಸ್‌ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ,  ಕೆಎಲ್ ರಾಹುಲ್  ಬ್ಯಾಟಿಂಗ್ ಸಂದರ್ಭ ಎರಡು ಕ್ಯಾಚ್ ಕೈಬಿಟ್ಟಿದ್ದರು. ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್ ಕೊಹ್ಲಿ ಟೀಕಿಸುವ ಭರದಲ್ಲಿ ಆಡಿದ ಮಾತೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.

Ab joh lockdown tha to sirf Anushka ki bowling ki practice ki unhone, wo video dekhi hai, usse to kuch nahi hona hai ಎಂದಿದ್ದರು ಗವಾಸ್ಕರ್.

 

Get real time updates directly on you device, subscribe now.