ಐ.ಎಸ್.ಎಫ್ ಕುವೈಟ್ ರಕ್ತದಾನ ಶಿಬಿರ: ಅತ್ಯುತ್ಸಾಹದಲ್ಲಿ ಪಾಲ್ಗೊಂಡ ಅನಿವಾಸಿಗಳು
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಇಂಡಿಯನ್ ಸೋಶಿಯಲ್ ಫೋರಂ ಕುವೈಟ್, ಕರ್ನಾಟಕ ಘಟಕದ ಅಧ್ಯಕ್ಷರು ಮಾತನಾಡಿದರು.
ಕೋವಿಡ್ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಜಾತಿಮತಭೇದವಿಲ್ಲದೆ ನೂರಕ್ಕೂ ಹೆಚ್ಚಿನ ಅನಿವಾಸಿಗಳು ಪಾಲ್ಗೊಂಡರು.
ಕರಾವಳಿ ಕರ್ನಾಟಕ ವರದಿ
ಕುವೈಟ್: ಬ್ಲಡ್ ಬ್ಯಾಂಕ್ ಕುವೈಟ್ ಮತ್ತು ಇಂಡಿಯನ್ ಸೋಶಿಯಲ್ ಫೋರಂ ಜಂಟಿ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ಜರುಗಿತು.
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಇಂಡಿಯನ್ ಸೋಶಿಯಲ್ ಫೋರಂ ಕುವೈಟ್, ಕರ್ನಾಟಕ ಘಟಕದ ಅಧ್ಯಕ್ಷರು ಮಾತನಾಡಿದರು.
ಸಾರ್ವಜನಿಕ ರಕ್ತದಾನವು ಈಸಮಯದ ಅವಶ್ಯಕತೆಯಾಗಿದ್ದು, ಕುವೈಟ್ ರಕ್ತನಿಧಿಗಳಲ್ಲಿ ರಕ್ತದ ಅಭಾವವಿದ್ದು ಭಾರತೀಯ ಅನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆನೀಡಿದರು.
ಅತ್ಯುತ್ಸಾಹದಿಂದ ಭಾಗವಹಿಸಿದ ಕುವೈಟ್ ಅನಿವಾಸಿ ಭಾರತೀಯ ರಕ್ತದಾನಿಗಳು ಸಂಜೆಯವರೆಗೂ ತಂಡೋಪತಂಡವಾಗಿ ಆಗಮಿಸುತ್ತಿರುವುದು ಕಂಡುಬಂತು.
ಕೋವಿಡ್ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಜಾತಿಮತಭೇದವಿಲ್ಲದೆ ಸುಮಾರು ನೂರಕ್ಕೂಹೆಚ್ಚಿನ ಅನಿವಾಸಿಗಳು ಪಾಲ್ಗೊಂಡರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಡಾ. ರಾನಿಯಾಇಬ್ರಾಹಿಂ, ಇಂಡಿಯನ್ ಸೋಶಿಯಲ್ ಫೋರಂ ಪದಾಧಿಕಾರಿಗಳು ಮತ್ತು ಸ್ವಯಂಸೇವಕರ ಶಿಸ್ತು ಮತ್ತು ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಬದ್ರ್ಅಲ್ಸಮಾಮೆಡಿಕಲ್ ಸೆಂಟರ್ ವಸ್ಥಾಪಕರಾದ ಅಬ್ದುಲ್ರಝಾಕ್’ರವರು ಮಾತನಾಡಿ ಐಎಸ್ಎಫ್ ಶೈಲಿ ಮಾದರಿಯಾಗಿದ್ದು ಇಂತಹ ಇನ್ನಷ್ಟು ಜನಪರ ಕಾರ್ಯಗಳನ್ನುನಡೆಸುವಂತಾಗಲಿ ಎಂದು ಹಾರೈಸಿದರು.