ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ: ಐವರ ಬಂಧನ

ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆ.

ಕಿಶನ್ ಹೆಗ್ಡೆ ಮತ್ತು ಮನೋಜ್ ಕೋಡಿಕೆರೆ ನಡುವೆ ಹಣಕಾಸು ವಿಷಯದಲ್ಲಿ ವಿವಾದಕ್ಕೆ ಸಂಬಂಧಿಸಿ ಮನೋಜ್ ಕೋಡಿಕೆರೆ ಇತರ ಆರೋಪಿಗಳೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಹಿರಿಯಡ್ಕ ಪೇಟೆಯಲ್ಲಿ ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಜೋಕಟ್ಟೆ ತೋಕೂರು ನಿವಾಸಿ ಮನೋಜ್ ಕುಲಾಲ್ ಯಾನೆ ಮನೋಜ್ ಕೋಡಿಕೆರೆ(37), ಕಾಟಿಪಳ್ಳ ಕೃಷ್ಣಾಪುರದ ಚಿತ್ತರಂಜನ್ ಪೂಜಾರಿ(27), ಬಂಟ್ವಾಳ ಪೊಳಲಿಯ ಚೇತನ್ ಯಾನೆ ಚೇತು ಪಡೀಲ್(32), ಬಂಟ್ವಾಳ ಸಂಗಬೆಟ್ಟು ರಮೇಶ್ ಪೂಜಾರಿ(38), ಕಾಟಿಪಳ್ಳ ಕುತ್ತೆತ್ತೂರಿನ ದೀಕ್ಷಿತ್ ಶೆಟ್ಟಿ ಯಾನೆ ದೇವಿಪ್ರಸಾದ್(29) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಮತ್ತು ಬ್ರಹ್ಮಾವರ ಎಸ್ಸೈ ರಾಘವೇಂದ್ರ ಅವರ ತಂಡ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಕಿಶನ್ ಹೆಗ್ಡೆ ಮತ್ತು ಮನೋಜ್ ಕೋಡಿಕೆರೆ ನಡುವೆ ಹಣಕಾಸು ವಿಷಯದಲ್ಲಿ ವಿವಾದಕ್ಕೆ ಸಂಬಂಧಿಸಿ ಮನೋಜ್ ಕೋಡಿಕೆರೆ ಇತರ ಆರೋಪಿಗಳೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ..

ಕಿಶನ್ ಹೆಗ್ಡೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಹೋಗಲು ಕಾರಿನಿಂದ ಇಳಿಯುವ ಸಂದರ್ಭ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳ ತಂಡವು ತಲವಾರಿನಿಂದ ಕಡಿದು ಕೊಲೆಗೈಯಲಾಗಿತ್ತು.

ಘಟನೆ ನಡೆದ ಸಂದರ್ಭ ಕಿಶನ್ ಜೊತೆಗಿದ್ದ ಹರಿಪ್ರಸಾದ್ ಶೆಟ್ಟಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

 

Get real time updates directly on you device, subscribe now.