ಲಾಕ್ಡೌನ್ ಸಂದರ್ಭ ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ನಿರ್ಮಿಸಿದ ಬಿಜೆಪಿಗರು: ವಿನಯ ಕುಮಾರ ಸೊರಕೆ ಆಕ್ರೋಶ

ಲಾಕ್ಡೌನ್ ಸಂದರ್ಭದಲ್ಲಿ ಮರಳು ದಂಧೆ, ಅಕ್ರಮ ಮರ ಸಾಗಾಟ ಮತ್ತು ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ರಚನೆಯಂತ ಅಕ್ರಮಗಳಲ್ಲಿ ಬಿಜೆಪಿಯ ಮುಖಂಡರು ನಿರತರಾಗಿದ್ದದು ನಾಚಿಕೆಗೇಡಿನ ಸಂಗತಿ.

ಅವೈಜ್ಞಾನಿಕ ಲಾಕ್ಡೌನ್ ವಲಸೆ ಕಾರ್ಮಿಕರ ಮಾರಣ ಹೋಮಕ್ಕೆ ಕಾರಣ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಲಾಕ್ಡೌನ್ ಸಂದರ್ಭದಲ್ಲಿ ಮರಳು ದಂಧೆ, ಅಕ್ರಮ ಮರ ಸಾಗಾಟ ಮತ್ತು ಸರಕಾರದ ಸಿಮೆಂಟ್ ಬಳಸಿ ಸ್ವಂತ ಕಟ್ಟಡ ರಚನೆಯಂತ ಅಕ್ರಮಗಳಲ್ಲಿ ಬಿಜೆಪಿಯ ಮುಖಂಡರು ನಿರತರಾಗಿದ್ದದು ನಾಚಿಕೆಗೇಡಿನ ಸಂಗತಿ. ಕೊರೊನಾ ಮಹಾಮಾರಿಯೊಂದಿಗೆ ಈಗ ನೆರೆಯ ಹಾವಳಿ ಜನರ ಬದುಕನ್ನು ದುಸ್ತರಗೊಳಿಸಿದೆ. ಈ ನೆರೆ ಪರಿಹಾರವನ್ನು ಶೀಘ್ರದಲ್ಲಿ ಫಲಾನುಭವಿಗಳಿಗೆ ವಿತರಿಸಬೇಕು. ಇಲ್ಲವಾದರೆ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅವೈಜ್ಞಾನಿಕ ಲಾಕ್ಡೌನ್ನಿಂದ ಕೋವಿಡ್-19 ಸಾಂಕ್ರಮಿಕ ರೋಗ ನಿಯಂತ್ರಣವಾಗದೇ ವಲಸೆ ಕಾರ್ಮಿಕರ ಮಾರಣಹೋಮಕ್ಕೆಕಾರಣವಾಯಿತು. ಸಾಂಕ್ರಮಿಕ ರೋಗವನ್ನು ಗಂಬೀರವಾಗಿ ಪರಿಗಣಿಸಿದೆ ಅದನ್ನು ತಮ್ಮ ರಾಜಕೀಯ ನಡೆಎಂಬುದಾಗಿ ಪರಿಗಣಿಸಿದ ಕೇಂದ್ರ ಸರಕಾರ ಗಂಟೆ ಬಡಿಯಿರಿ, ಚಪ್ಪಾಳೆ ಹೊಡೆಯಿರಿ, ದೀಪ ಹತ್ತಿಸಿ ಕೊರೊನಾ ಓಡಿಸಿ ಎಂದು ಗಿಮಿಕ್ಸ್ಗಳಿಗೆ ಒತ್ತಾಸೆಕೊಟ್ಟಿದ್ದರಿಂದ ಇಂದು ಈ ರೋಗ ಹರಡುವಿಕೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೆ ದೇಶಬರುವಂತಾಯಿತು ಎಂದು ಸೊರಕೆ ಹೇಳಿದರು.

ಈ ರೋಗ ನಿಯಂತ್ರಣ ಇನ್ನೊಂದು ಅಕ್ರಮ ದಂಧೆಗಳಿಗೆ ದಾರಿ ಮಾಡಿ ಕೊಟ್ಟಿತು. ಆದರೂ ಈ ದುರಿತ ಕಾಲದಲ್ಲಿ ಜನರ ಬದುಕಿಗೆ ಸಹಾಯವಾದುದು ಕಾಂಗ್ರೆಸ್ ಸರಕಾರ ಜಾರಿಗೆ ತಂದ ಆಹಾರ ಭದ್ರತೆ ಕಾನೂನು, ನರೇಗಾ ಕಾನೂನು ಮತ್ತು ಕಾಂಗ್ರೆಸ್ ಕಾಲದಲ್ಲಿ ನೇಮಕವಾದ ಆಶಾ ಕಾರ್ಯಕರ್ತರು ಎಂಬುದನ್ನು ವಿರೋಧ ಪಕ್ಷಗಳು ಮರೆಯಬಾರದು ಎಂದು ವಿನಯಕುಮಾರ್ ಸೊರಕೆಯವರು ವಿರೋಧ ಪಕ್ಷಗಳಿಗೆ ಎಚ್ಚರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದ ಮೂಲ ಕೇಂದ್ರ ಪಂಚಾಯತ್, ಇದು ಸರಕಾರವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ಗ್ರಾಮ ಪಂಚಾಯತ್ ಚುನಾವಣೆ ಎಲ್ಲಾ ಚುನಾವಣೆಗಳಿಗಿಂತ ಭಿನ್ನ ಮತ್ತು ಮಹತ್ತರವಾದುದು. ಹಾಗಾಗಿ ಕಾರ್ಯಕರ್ತರು ಇಂದಿನಿಂದಲೇ ಪಂಚಾಯತ್ ಚುನಾವಣೆಗೆ ಸಜ್ಜಾಗಬೇಕು. ಇಂದಿನ ರಾಜ್ಯ ಸರಕಾರ ಯಾವುದೇಅಭಿವೃದ್ಧಿ ಕೆಲಸವನ್ನು ಮಾಡದೇ ಕಾಂಗ್ರೆಸ್ ಸರಕಾರ ಮಾಡಿದ ಕಾಮಗಾರಿಗಳನ್ನು ಉದ್ಘಾಟಿಸುತ್ತಾ ಕಾಲ ಕಳೆಯುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲಾಗದ ಸರಕಾರಅದನ್ನುಅಕ್ರಮವಾಗಿ ಹಣ ಗಳಿಸುವ ದಂದೆಯನ್ನಾಗಿ ಪರಿವರ್ತಿಸಿದೆ ಎಂದು ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ವೀಕ್ಷಕ ನೀರೆ ಕೃಷ್ಣ ಶೆಟ್ಟಿಯವರು ನುಡಿದರು.

ವೇದಿಕೆಯಲ್ಲಿ ಕಾಪು ಉತ್ತರ ವಲಯ ಯುವಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಚರಣ್ ವಿಠಲ್, ಇಂಟಕ್ ಅಧ್ಯಕ್ಷರಾದ  ಉಮೇಶ್ ಕಾಂಚನ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷರಾದ  ರಿಯಾಝ್ ಪಳ್ಳಿ ಉಪಸ್ಥಿತರಿದ್ದರು

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಗಿರೀಶ್ ಕುಮಾರ್ ಸ್ವಾಗತಿಸಿದರು.ಮಾಜಿ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು.

ಕಾರ್ಯದರ್ಶಿ ಆಬಿದ್ ಆಲಿಯವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದನೆ ಸಲ್ಲಿಸಿದರು.

ಅಗಲಿದ ಮಹಾನ್ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆತ್ಮಕ್ಕೆ ಚಿರ ಶಾಂತಿ ಕೋರಿ ಮೌನ ಪ್ರಾರ್ಥನೆ ಜರಗಿತು

ಈ ಸಭೆಯಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಸ್ವಯಂ ಸೇವಕರಿಗೆ ಕಿಟ್ ವಿತರಿಸಲಾಯಿತು.

Get real time updates directly on you device, subscribe now.