‘ಪವರ್ ಟಿವಿಯನ್ನು ಬಂದ್ ಮಾಡಿಸಿದ ರಾಜ್ಯ ಸರಕಾರ’: ಕಣ್ಣೀರಿಟ್ಟ ರಹಮಾನ್ ಹಾಸನ್

ನಿರೂಪಕ ರಹಮಾನ್ ಹಾಸನ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟ ಕಳವಳಕಾರಿ ಸಂಗತಿ.

‘250 ಉದ್ಯೋಗಿಗಳಿರುವ ಚಾನೆಲ್ ಅನ್ನು ಬಂದ್ ಮಾಡಿಸಿದ್ದು, ಎಲ್ಲರೂ ಬೀದಿಗೆ ಬಂದಿದ್ದೇವೆ’

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಭ್ರಷ್ಟಾಚಾರದ ವರದಿ ಮಾಡಿರುವುದಕ್ಕಾಗಿ ‘ಪವರ್ ಟಿವಿ’ ಸುದ್ದಿವಾಹಿನಿಯನ್ನು ಬಂದ್ ಮಾಡಲಾಗಿದೆ. 250 ಉದ್ಯೋಗಿಗಳಿರುವ ಚಾನೆಲ್ ಅನ್ನು ಬಂದ್ ಮಾಡಿಸಿದ್ದು, ಎಲ್ಲರೂ ಬೀದಿಗೆ ಬಂದಿದ್ದೇವೆ ಎಂದು ನಿರೂಪಕ ರಹಮಾನ್ ಹಾಸನ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರಿಟ್ಟ ಕಳವಳಕಾರಿ ಸಂಗತಿ ವರದಿಯಾಗಿದೆ.

ಪವರ್ ಟಿವಿ ಮೇಲೆ ದಾಳಿಗೈದ ಸಿಸಿಬಿ ಪೊಲೀಸರು ಸರ್ಚ್ ವಾರಂಟ್ ಜೊತೆ ಬಂದಿದ್ದು ಎಲ್ಲ ದಾಖಲೆಗಳನ್ನು ಪಡೆದಿದ್ದಾರೆ. ಫೇಸ್‌ಬುಕ್ ಲೈವ್ ಬಂದ್ ಮಾಡಿದ್ದಾರೆ. ನಾವು ಸತ್ಯಕ್ಕಾಗಿ ದ್ವನಿ ಎತ್ತಿದ್ದೇವೆ. ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ನಮ್ಮ ಕುಟುಂಬಗಳನ್ನು ಬೀದಿಗೆ ತಂದಿರಿ. ನಾವು ನಿಮಗೇನು ಮಾಡಿದ್ದೇವೆ ಎಂದು ಫೇಸ್‌ಬುಕ್ ಲೈವ್‌ನಲ್ಲಿ ರಹಮಾನ್ ಕಣ್ಣೀರಿಡುತ್ತಲೇ ಪ್ರಶ್ನಿಸಿದ್ದಾರೆ.

Get real time updates directly on you device, subscribe now.