‘ಪವರ್ ಟಿವಿ’ ವಾಹಿನಿ ಲೈವ್ ಬಂದ್ ಸರಿಯಲ್ಲ’: ಬಂದ್ ತೆರವುಗೊಳಿಸಲು ಸಿಎಂಗೆ ಪತ್ರಕರ್ತರ ಸಂಘದ ಅಧ್ಯಕ್ಷರ ಆಗ್ರಹ

ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅವಲಂಬಿಸಿದ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ.

‘ಪವರ್ ಟಿವಿ’ವಾಹಿನಿ ಮಾಲಕರ ಮೇಲೆ ಆರೋಪ ಬೇರೆ ವಿಚಾರ. ತನಿಖೆ ನಡೆಸುವುದಕ್ಕೆ ಅಭ್ಯಂತರ ಇಲ್ಲ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ‘ಪವರ್ ಟಿವಿ’ ವಾಹಿನಿ ಲೈವ್ ಬಂದ್ ಮಾಡಿರುವುದು ಸರಿಯಾದ ಕ್ರಮ ಅಲ್ಲ. ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅದನ್ನು ಅವಲಂಬಿಸಿದ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ‘ಪವರ್ ಟಿವಿ’ ವಾಹಿನಿ ಲೈವ್ ಬಂದ್ ತೆರವುಗೊಳಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಆಗ್ರಹಿಸಿದ್ದಾರೆ.

‘ಪವರ್ ಟಿವಿ’ವಾಹಿನಿ ಮಾಲಕರ ಮೇಲೆ ಆರೋಪ ಬೇರೆ ವಿಚಾರ. ತನಿಖೆ ನಡೆಸುವುದಕ್ಕೆ ಅಭ್ಯಂತರ ಇಲ್ಲ. ಆದರೆ ‘ಪವರ್ ಟಿವಿ’ವಾಹಿನಿ ಬಂದ್ ಬಗ್ಗೆ ಗೃಹಸಚಿವರಿಗೆ ಸೂಚನೆ ನೀಡಿ ಬಂದ್ ತೆರವುಗೊಳಿಸಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Get real time updates directly on you device, subscribe now.