ಮಾಧ್ಯಮ ದಮನಿಸುವ ಸಿಎಂ ಕ್ರಮದಿಂದಾಗಿ ಜನತೆ ಟಿವಿ ಚಾನೆಲ್ ಆರೋಪ ನಂಬುವಂತಾಗಿದೆ: ಸಿದ್ದರಾಮಯ್ಯ

ತನ್ನ ಮಗನ ಭ್ರಷ್ಟಾಚಾರದ ವರದಿ ಪ್ರಸಾರ ಮಾಡಿದ ಕಾರಣಕ್ಕೆ ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಖಂಡನೀಯ.

ಸಂಶಯ ‌ನಿವಾರಣೆಗೆ ತನಿಖೆಯೊಂದೇ ದಾರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಪವರ್ ಟಿವಿ ಸುದ್ದಿವಾಹಿನಿಯನ್ನು ಬಂದ್ ಮಾಡಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅತಿರೇಕದ ಕ್ರಮದಿಂದಾಗಿ ಟಿವಿ ಚಾನೆಲ್ ಆರೋಪವನ್ನು ಜನತೆ ನಂಬುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಮಗನ ಭ್ರಷ್ಟಾಚಾರದ ವರದಿ ಪ್ರಸಾರ ಮಾಡಿದ ಕಾರಣಕ್ಕೆ ಮುಖ್ಯಮಂತ್ರಿ ಅವರು ಅಧಿಕಾರ ದುರುಪಯೋಗದ ಮೂಲಕ ಪವರ್ ಟಿವಿ ಚಾನೆಲನ್ನೇ ಬಂದ್ ಮಾಡಲು ಹೊರಟಿರುವುದು ಖಂಡನೀಯ.

ಮಾಧ್ಯಮ ದಮನದ ಅತಿರೇಕದ ಈ ಕ್ರಮದಿಂದಾಗಿ ‌ಟಿವಿ ಚಾನೆಲ್‌ನ ಆರೋಪವನ್ನು ಜನತೆ ನಂಬುವಂತಾಗಿದೆ.

ಸಂಶಯ ‌ನಿವಾರಣೆಗೆ ತನಿಖೆಯೊಂದೇ ದಾರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Get real time updates directly on you device, subscribe now.