ಕಾಸರಗೋಡು: ಕೋವಿಡ್ ನಿಗಾ ಕೇಂದ್ರದಿಂದ ಕೊಲೆ ಯತ್ನ ಆರೋಪಿ ಪರಾರಿ

ಮುಸ್ಲಿಂ ಲೀಗ್ ಕಾರ್ಯಕರ್ತರೊಬ್ಬರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಆರೋಪಿ.

ಪಡನ್ನಕ್ಕಾಡ್ ಕೋವಿಡ್ ನಿಗಾ ಕೇಂದ್ರದ ಕಿಟಕಿ ಮುರಿದು ಪರಾರಿ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಮುಸ್ಲಿಂ ಲೀಗ್ ಕಾರ್ಯಕರ್ತರೊಬ್ಬರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ರಾತ್ರಿ ನಡೆದಿದೆ.

ಉಪ್ಪಳ ಕೈಕಂಬದ ಆದಂ ಖಾನ್(24) ಪರಾರಿಯಾದ ಆರೋಪಿಯಾಗಿದ್ದಾನೆ.

ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾ ಎಂಬವರ ಕೊಲೆ ಯತ್ನ ಪ್ರಕರಣದ ಆರ್ಫಿ ಆದಂ ಪಡನ್ನಕ್ಕಾಡ್ ಕೋವಿಡ್ ನಿಗಾ ಕೇಂದ್ರದ ಕಿಟಕಿ ಮುರಿದು ಪರಾರಿಯಾಗಿದ್ದಾನೆ.

ಆದಂ ಮತ್ತು ಸಹಚರ ನೌಷಾದ್‌ನನ್ನು ಡಿವೈಎಸ್ಪಿ ಪಿ. ಬಾಲಕೃಷ್ಣ ನೇತೃತ್ವದ ಪೊಲೀಸ್ ತಂಡ ಬಂಧಿಸಿದ್ದು, ನ್ಯಾಯಾಲಯ ಪ್ರಕ್ರಿಯೆಗಳ ಬಳಿಕ ಕೋವಿಡ್ ನಿಗಾ ಕೇಂದ್ರದಲ್ಲಿ ಇರಿಸಲಾಗಿತ್ತು.

ಪರಾರಿಯಾದ ಆದಂ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Get real time updates directly on you device, subscribe now.