ಸುಳ್ಯ: ಬಾಲಕಿಗೆ ಕಿರುಕುಳ ನೀಡಿದ ಯುವಕ ಸೆರೆ

ಬಾಲಕಿ ರಾತ್ರಿ ಸ್ನಾನ ಮಾಡುತ್ತಿದ್ದಾಗ ವಿಡೀಯೋ ಮಾಡಿದ ಆರೋಪ.

ಬಾಲಕಿಯ ತಂದೆ ಯುವಕನನ್ನು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಸುಳ್ಯ: ಬಾಲಕಿ ರಾತ್ರಿ ಸ್ನಾನ ಮಾಡುತ್ತಿದ್ದಾಗ ವಿಡೀಯೋ ಮಾಡಿದ ಆರೋಪದಲ್ಲಿ ಕಲ್ಮಡ್ಕದ ಯುವಕನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಕಲ್ಮಡ್ಕದ ಶ್ಯಾಮ ಬಂಧಿತ ಆರೋಪಿ. ಈತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ತಾಯಿಯು ಈತ ವಿಡೀಯೋ ಮಾಡುವ ಸಂದರ್ಭ ನೋಡಿದ್ದು, ಮೊಬೈಲ್ ಕಸಿಯಲು ಯತ್ನಿಸಿದಾಗ ಪರಾರಿಯಾಗಿದ್ದ. ಬಾಲಕಿಯ ತಂದೆ ಪುತ್ರಿಗೆ ಕಿರುಕುಳ ನೀಡಿದ ಬಗ್ಗೆ ಯುವಕನನ್ನು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾಗಿ ದೂರಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Get real time updates directly on you device, subscribe now.