ಉತ್ತರ ಪ್ರದೇಶ: ಇನ್ನೋರ್ವ ದಲಿತ ಯುವತಿ ಅತ್ಯಾಚಾರ, ಕೊಲೆ

ಯುವತಿಯ ಕೈಗಳು ಮತ್ತು ಕಾಲುಗಳು ಅತ್ಯಾಚಾರದ ಬರ್ಬರತೆಗೆ ಮುರಿದಿದ್ದವು ಎಂಬ ಸಂಗತಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಯುವತಿಗೆ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪವನ್ನು ಪೊಲೀಸರು ಅಲ್ಲಗೆಳೆದಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಲಖ್ನೊ: ಹಾಥ್ರಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಇನ್ನೋರ್ವ ದಲಿತ ಯುವತಿಯ ಅತ್ಯಾಚಾರದಿಂದ ಸಾವಪ್ಪಿದ ಕಳವಳಕಾರಿ ಘಟನೆ ಬಲ್ರಾಪುರ್‌ನಿಂದ ವರದಿಯಾಗಿದೆ.

ಇಪ್ಪತ್ತೆರಡರ ಹರಯದ ಯುವತಿಯ ಅತ್ಯಾಚಾರಗೈದ ಬಳಿಕ ಆರೋಪಿಗಳು ಆಕೆಯನ್ನು ವೈದ್ಯರೋರ್ವರ ಬಳಿ ಕರೆದೊಯ್ದಿದ್ದು, ಅಷ್ಟರಲ್ಲೇ ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮನೆಗೆ ಕಳಿಸಿದ್ದು, ಆಕೆ ಸಾವಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಶಾಹಿದ್ ಮತ್ತು ಸಾಹಿಲ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಗೆಳೆತನ ಮಾಡುವ ನೆಪದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು. ಮನೆಯವರು ಮಂಗಳವಾರ ರಾತ್ರಿ ಯುವತಿ ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಮೊಬೈಲ್ ಕರೆ ಮಾಡಿದಾಗ ಮೊಬೈಲ್ ನಾಟ್ ರೀಚೇಬಲ್ ಆಗಿತ್ತು. ತಡ ರಾತ್ರಿ ಯುವತಿ ಗ್ಲುಕೋಸ್ ಡ್ರಿಪ್ಸ್‌ಗಳು ಕೈಗೆ ಚುಚ್ಚಲ್ಪಟ್ಟ ಸ್ಥಿತಿಯಲ್ಲಿ, ಜೀವನ್ಮರಣದ ಹೋರಾಟ ನಡೆಸುತ್ತಿರುವಂಥ ಸ್ಥಿತಿಯಲ್ಲಿ ಮನೆಗೆ ರಿಕ್ಷಾದಲ್ಲಿ ತಲುಪಿದ್ದಳು. ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆಕೆ ಮಾರ್ಗದಲ್ಲೇ ಸಾವಪ್ಪಿದ್ದಾರೆ ಎಂದು ಬಲ್ರಾಂಪುರ ಎಸ್ಪಿ ದೇವ್ ರಂಜನ್ ವರ್ಮಾ ತಿಳಿಸಿದ್ದಾರೆ.

ಯುವತಿಯ ಕೈಗಳು ಮತ್ತು ಕಾಲುಗಳು ಅತ್ಯಾಚಾರದ ಬರ್ಬರತೆಗೆ ಮುರಿದಿದ್ದವು ಎಂಬ ಸಂಗತಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಆದರೆ ಪೊಲೀಸರು ಮರಣೋತ್ತರ ಪರೀಕ್ಷೆಯಲ್ಲಿ ಅಂಥ ಗಾಯಗಳು ಯುವತಿಗೆ ಆಗಿಲ್ಲ ಎಂದು ವರದಿ ಬಂದಿದೆ ಎಂದಿದ್ದಾರೆ. ಘಟನೆಯಿಂದ ಆದ ಆಘಾತ ಮತ್ತು ರಕ್ತಸ್ರಾವ ಯುವತಿಯ ಸಾವಿಗೆ ಕಾರಣ ಎಂದು ದೇವಿಪಟ್ನ ವಲಯ ಡಿಐಜಿ ರಾಕೇಶ್ ಸಿಂಗ್ ಹೇಳಿದ್ದಾರೆ. ಯುವತಿ ಮೇಲೆ ಲೈಂಗಿಕ ಹಲ್ಲೆ ನಡೆದಿದೆಯೇ ಇಲ್ಲವೇ ಎಂದು ವೈದ್ಯಕೀಯ ತಜ್ನರು ಪರಿಶೀಲಿಸುತ್ತಿದ್ದಾರೆ. ಯುವತಿಗೆ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪವನ್ನು ಪೊಲೀಸರು ಅಲ್ಲಗೆಳೆದಿದ್ದಾರೆ.

 

Get real time updates directly on you device, subscribe now.