ಡ್ರಗ್ಸ್ ದಂಧೆ: ಮಣಿಪಾಲ ವಿದ್ಯಾರ್ಥಿ ಬಂಧನ; 14.94ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ

ಎಂಐಟಿಯ ಇನ್‌ಸ್ಟ್ರುಮೆಂಟೆಶನ್ ಆಂಡ್ ಕಂಟ್ರೋಲ್ ವಿಭಾಗದ ಏಳನೆ ಸೆಮಿಸ್ಟರ್ ವಿದ್ಯಾರ್ಥಿ.

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಪೊಲೀಸ್ ಕಾರ್ಯಾಚರಣೆ

ಕರಾವಳಿ ಕರ್ನಾಟಕ ವರದಿ
ಮಣಿಪಾಲ: ಮಣಿಪಾಲ ಎಂಐಟಿಯ ವಿದ್ಯಾರ್ಥಿಯೋರ್ವನನ್ನು ಉಡುಪಿ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಹಾಗೂ ಮಣಿಪಾಲ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಎಂಐಟಿಯ ಇನ್‌ಸ್ಟ್ರುಮೆಂಟೆಶನ್ ಆಂಡ್ ಕಂಟ್ರೋಲ್ ವಿಭಾಗದ ಏಳನೆ ಸೆಮಿಸ್ಟರ್ ವಿದ್ಯಾರ್ಥಿ ಹಿಮಾಂಶು ಜೋಶಿ(20) ಬಂಧಿತ ಆರೋಪಿ.

ಈತ ಮಾದಕ ಮಾತ್ರೆಗಳನ್ನು ಸ್ಕೂಟರ್‌ನಲ್ಲಿ ಮಾರಲು ಯತ್ನಿಸುವ ಸಂದರ್ಭ ಮಣಿಪಾಲ ಪೊಲೀಸರು ಬಂಧಿಸಿ 14.94ಲಕ್ಷ ರೂ. ಮೌಲ್ಯದ 498 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡರು. ಮೊಬೈಲ್ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಆಂತರಿಕ ಭದ್ರತಾ ವಿಭಾಗದ ಆರಕ್ಷಕ ನಿರೀಕ್ಷಕ ಮಧು ಟಿ.ಎಸ್, ಉಡುಪಿ ವಿಭಾಗದ ಡಿವೈಎಸ್ಪಿ ಟಿ.ಆರ್.ಜೈಶಂಕರ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ ಗೌಡ, ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ, ಉಡುಪಿ ಸಹಾಯಕ ಔಷಧ ನಿಯಂತ್ರಕ ನಾಗರಾಜ, ಸಿಬಂದಿಗಳಾದ ಶೈಲೇಶ್, ದಿನೇಶ ಶೆಟ್ಟಿ, ಥಾಮ್ಸನ್, ಪ್ರಸನ್ನ. ಮಂಜುನಾಥ ಶೆಟ್ಟಿ, ಪ್ರಸಾದ ಶೆಟ್ಟಿ, ಆದರ್ಶ ನಾಯ್ಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.