ಕೋವಿಡ್ ಸಂದರ್ಭ ಕಾಂಗ್ರೆಸ್ ಸರಕಾರದ ನರೇಗಾ, ಅನ್ನಭಾಗ್ಯ ಯೋಜನೆ ಫಲಪ್ರದ : ವಿನಯ ರಾಜ್

ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ.

ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಅನಿಲ ಭಾಗ್ಯ ಯೋಜನೆಯಲ್ಲಿ ಅರ್ಹರಿಗೆ ಗ್ಯಾಸ್ ಸ್ಟವ್ ಹಾಗೂ ಅಡುಗೆ ಅನಿಲ ಸಿಲಿಂಡರನ್ನು ಉಚಿತವಾಗಿ ನೀಡಿತ್ತು.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಯೋಜನೆಗಳಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂ.ನರೇಗಾ ಯೋಜನೆ) ಹಾಗೂ ಸಿದ್ಧರಾಮಯ್ಯನವರ ಅನ್ನಭಾಗ್ಯ ಯೋಜನೆಗಳಿಂದ ರಾಜ್ಯದ ಜನತೆ ಹೆಚ್ಚು ಪ್ರಯೋಜನ ಪಡೆದುಕೊಂಡದ್ದು ಯೋಜನೆಯ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ, ಕೆಪಿಸಿಸಿ ಪ್ಯಾನಲಿಸ್ಟ್ ಹಾಗೂ ಉಡುಪಿ ಬ್ಲಾಕ್ ಸಂಯೋಜಕರಾದ ವಿನಯ ರಾಜ್ ಅಭಿಪ್ರಾಯಪಟ್ಟರು. ಬ್ಲಾಕ್ ಕಾಂಗ್ರೆಸ್ ಮತ್ತು ಕಡೆಕಾರು ಗ್ರಾಮೀಣ  ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ  ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರಕಾರದ ಉಜ್ವಲ ಯೋಜನೆ ಗ್ಯಾಸ್ ಸ್ಟವ್ ಹಾಗೂ ಅಡುಗೆ ಅನಿಲ ಸಿಲಿಂಡರ್ ನೀಡಿ ನಂತರ ಕಂತುಗಳಲ್ಲಿ ಹಣವನ್ನು ಫಲಾನುಭವಿಗಳಿಂದ ಹಿಂಪಡೆಯುವ ಯೋಜನೆ ಎಂದು ಟೀಕಿಸಿದರು. ರಾಜ್ಯದಲ್ಲಿ ಸಿದ್ಧರಾಮಯ್ಯನವರ ಸರಕಾರ ಅನಿಲ ಭಾಗ್ಯ ಯೋಜನೆಯಲ್ಲಿ ಅರ್ಹರಿಗೆ ಗ್ಯಾಸ್ ಸ್ಟವ್ ಹಾಗೂ ಅಡುಗೆ ಅನಿಲ ಸಿಲಿಂಡರನ್ನು ಉಚಿತವಾಗಿ ನೀಡಿತ್ತು ಎಂದು ನೆನಪಿಸಿದರು

ಮತದಾರರ ಪಟ್ಟಿಯ ಪ್ರತೀ ಪುಟಕ್ಕೆ ಒಬ್ಬ ಕಾರ್ಯಕರ್ತನನ್ನು ನೇಮಿಸಿ ಮನೆ ಮನೆ ಭೇಟಿ ಕೊಟ್ಟು ಪ್ರತೀ ಮತದಾರರ ವಿವರವನ್ನು ಪಡೆದುಕೊಳ್ಳುವಂತೆ  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಉಸ್ತುವಾರಿಗಳಾದ  ಸುಕುಮಾರ್ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.

ಆಯಾ ವಾರ್ಡ್ ಸ್ಥಳೀಯ ಕಾರ್ಯಕರ್ತರು ಪಂಚಾಯತ್ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮಾಜಿ ಜಿ.ಪಂ. ಸದಸ್ಯರಾದ  ದಿವಾಕರ ಕುಂದರ್ ಮನವಿ ಮಾಡಿದರು.

ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ ಗ್ರಾಮೀಣ ಕಾಂಗ್ರೆಸನ್ನು ಬಲಪಡಿಸುವ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬೇಕೆಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ವನಜ ಜಯಕರ್ ಮಾತನಾಡಿದರು.

ನಾರಾಯಣ ಗುರು ಸಭಾಭವನದಲ್ಲಿ ಜರುಗಿದ ಈ ಸಭೆಯಲ್ಲಿ  ಹಿರಿಯರಾದ ಧರ್ಮಪಾಲ್, ವಾಮನ ಬಂಗೇರಾ, ಹಿರಿಯ ನ್ಯಾಯವಾದಿ ಕೆ. ಸಂಜೀವ,ಕೇಶವ ಎಂ. ಕೋಟ್ಯಾನ್, ಜಗನ್ನಾಥ ಸನಿಲ್, ವೀಕ್ಷಕರಾದ ಸುಕೇಶ್ ಕುಂದರ್, ಚಂದ್ರಮೋಹನ್, ಸತೀಶ್ ಪುತ್ರನ್, ಆಕಾಶ್, ಶ್ರೀನಿವಾಸ ಹೆಬ್ಬಾರ್, ನಿಕಟಪೂರ್ವ ಪಂಚಾಯತ್ ಸದಸ್ಯರಾದ ನವೀನ್ ಶೆಟ್ಟಿ, ಜಯಕರ ಕನ್ನರ್ಪಾಡಿ, ಆಶಾ ಜಿ. ಶೆಟ್ಟಿ, ಅಶೋಕ ಕುಮಾರ್ ಶೆಟ್ಟಿ, ತಾರಾನಾಥ ಸುವರ್ಣ, ನಿರ್ಮಲ ಜತಿನ್ ಕಡೆಕಾರ್, ವಿನಯ ಪ್ರಕಾಶ್, ಧನಂಜಯ, ಬ್ಲಾಕ್ ಉಪಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಾರಾಯಣ ಕುಂದರ್, ಉಪಸ್ಥಿತರಿದ್ದರು.

ತಾರಾನಾಥ ಸುವರ್ಣ ಸ್ವಾಗತಿಸಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿದರು.

 

 

Get real time updates directly on you device, subscribe now.