ಕಾಸರಗೋಡು: 2.5ಕೋಟಿ ರೂ. ಮೌಲ್ಯದ ಶ್ರೀಗಂಧ ವಶ

ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾನು ನೇತೃತ್ವದ ತಂಡ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿವಾಸದ ಸಮೀಪವೇ ಶ್ರೀಗಂಧದ ಅಕ್ರಮ ಸಾಗಾಟ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ನಗರದ ಹೊರವಲಯದಲ್ಲಿ ಒಂದು ಕ್ವಿಂಟಾಲ್ ಶ್ರೀಗಂಧದ ಕೊರಡುಗಳನ್ನು ಅಕ್ರಮ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾನು ನೇತೃತ್ವದ ತಂಡ ವಶಪಡಿಸಿಕೊಂಡ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ವಶಪಡಿಸಿಕೊಂಡ ಶ್ರೀಗಂಧದ ಮೌಲ್ಯ 2.5ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿವಾಸದ ಸಮೀಪವೇ ಶ್ರೀಗಂಧದ ಅಕ್ರಮ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಮುಂಜಾನೆ 4:30 ಸುಮಾರಿಗೆ ಜಿಲ್ಲಾಧಿಕಾರಿ ಮತ್ತು ಅವರ ಕಾರು ಚಾಲಕ ಮತ್ತು ಗನ್ ಮ್ಯಾನ್ ಎಚ್ಚತ್ತಾಗ ಮನೆ ಬಳಿ ಭಾರೀ ಶಬ್ದ ಕೇಳಿಬಂದಿತ್ತು. ಚಾಲಕ ಮತ್ತು ಗನ್ ಮ್ಯಾನ್ ನೋಡಿದಾಗ ಸಿಮೆಂಟ್ ಸಾಗಾಟದ ಲಾರಿಯಲ್ಲಿ ವಿಶೇಷ ಕ್ಯಾಬಿನ್ ಮಾಡಿ ಅದರಲ್ಲಿ ಶ್ರೀಗಂಧದ ಕೊರಡುಗಳನ್ನು ತುಂಬಿಸಲಾಗುತ್ತಿತ್ತು. ಜಿಲ್ಲಾಧಿಕಾರಿಗಳು ಪೊಲೀಸರ ನೆರವಿನಿಂದ ಅಕ್ರಮ ಸಾಗಾಟವನ್ನು ತಡೆದಿದ್ದಾರೆ.

ಮನೆ ಮಾಲಕ ಮತ್ತು ಆರೋಪಿಗಳು ದಾಳಿ ಸಂದರ್ಭ ಪರಾರಿಯಾಗಿದ್ದಾರೆ. ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

Get real time updates directly on you device, subscribe now.