ಜನಾಕ್ರೋಶಕ್ಕೆ ಮಣಿದು ಮಾಸ್ಕ್ ದಂಡ ಪ್ರಮಾಣ ಇಳಿಸಿದ ಸಿಎಂ ಯಡಿಯೂರಪ್ಪ

ನಗರಗಳಲ್ಲಿ 250ರೂ. ಮತ್ತು ಗ್ರಾಮೀಣ ಭಾಗಗಳಲ್ಲಿ 100ರೂ. ದಂಡ ವಿಧಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ

ಮಾಸ್ಕ್ ಧರಿಸದಿರುವುದಕ್ಕೆ ಒಂದು ಸಾವಿರ ರೂ. ದಂಡ ವಿಧಿಸುವುದು ಸರಕಾರವೇ ನಡೆಸುವ ಹಗಲುದರೋಡೆ ಎಂದು ನಾಗರಿಕರ ಆಕ್ರೋಶ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ ಒಂದು ಸಾವಿರ ರೂ. ದಂಡ ವಿಧಿಸಲು ಹೊರಟು ಭಾರೀ ಜನಾಕ್ರೋಶಕ್ಕೆ ತುತ್ತಾದ ರಾಜ್ಯ ಸರಕಾರ ಇದೀಗ ದಂಡದ ಪ್ರಮಾಣ ಇಳಿಸಿದೆ.

ಮಾಸ್ಕ್ ಧರಿಸದಿರುವುದಕ್ಕೆ ಒಂದು ಸಾವಿರ ರೂ. ದಂಡ ವಿಧಿಸುವುದು ಸರಕಾರವೇ ನಡೆಸುವ ಹಗಲುದರೋಡೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಾಸ್ಕ್ ಧರಿಸದವರಿಗೆ ದಂಡ ಪ್ರಮಾಣವನ್ನು ಒಂದು ಸಾವಿರದಿಂದ 250ರೂ. ಇಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ನಗರಗಳಲ್ಲಿ 250ರೂ. ಮತ್ತು ಗ್ರಾಮೀಣ ಭಾಗಗಳಲ್ಲಿ 100ರೂ. ದಂಡ ವಿಧಿಸಲು ಆದೇಶ ಹೊರಡಿಸಿದ್ದಾರೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.