ಸುಳ್ಯ: ಗುಂಡಿನ ದಾಳಿಗೆ ಬಿಜೆಪಿ ಮುಖಂಡನ ಕೊಲೆ ಆರೋಪಿ ಬಲಿ

ಕೊಡಗಿನ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಆರೋಪಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ

ದುಷ್ಕರ್ಮಿಗಳು ಬೆನ್ನಟ್ಟಿ ಗುಂಡು ಹಾರಿಸಿದಾಗ ಗಂಭೀರ ಗಾಯಗೊಂಡು ಸಾವಪ್ಪಿದ್ದಾನೆ.

ಕರಾವಳಿ ಕರ್ನಾಟಕ ವರದಿ
ಸುಳ್ಯ: ತಾಲೂಕಿನ ಶಾಂತಿನಗರದಲ್ಲಿ ಕೊಲೆ ಪ್ರಕರಣದ ಆರೋಪಿಯೋರ್ವ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ಕೊಡಗಿನ ಬಿಜೆಪಿ ಮುಖಂಡ ಸಂಪಾಜೆ ಬಾಲಚಂದ್ರ ಕಳಗಿ ಕೊಲೆ ಆರೋಪಿ ಸಂಪತ್ ಕುಮಾರ್ (35)ಕೊಲೆಯಾಗಿದ್ದಾನೆ.

ಸಂಪತ್ ಮನೆಯಿಂದ ಕಾರಿನಲ್ಲಿ ತೆರಳುವ ಸಂದರ್ಭ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದ್ದು, ಸಂಪತ್ ಕಾರು ಕಂಫೌಂಡ್‌ಗೆ ತಾಗಿ ನಿಂತಿದೆ. ಈ ಸಂದರ್ಭ ಸಮೀಪದ ಕಾಂತಪ್ಪ ಎಂಬವರ ಮನೆಗೆ ಓಡಿ ಹೋಗಿ ಜೀವ ಉಳಿಸಿಕೊಳ್ಳುವ ಯತ್ನ ನಡೆಸಿದ್ದಾರೆ ಎನ್ನಲಾಗಿದ್ದು, ದುಷ್ಕರ್ಮಿಗಳು ಬೆನ್ನಟ್ಟಿ ಗುಂಡು ಹಾರಿಸಿದಾಗ ಗಂಭೀರ ಗಾಯಗೊಂಡು ಸಾವಪ್ಪಿದ್ದಾನೆ.

ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್ ಐ ಹರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜಾಮೀನು ಪಡೆದು ಕೆಲ ತಿಂಗಳ ಹಿಂದಷ್ಟೇ ಹೊರಬಂದಿದ್ದ.

ಸಂಪಾಜೆಯ ಕಳಗಿ ಬಾಲಚಂದ್ರ ಅವರನ್ನು ಅಪಘಾತ ನಡೆಸಿ ಕೊಲೆಗೈದ ಆರೋಪಿಗಳಲ್ಲಿ ಓರ್ವನಾದ ಸಂಪತ್ ಜಾಮೀನು ಪಡೆದು ಕೆಲ ತಿಂಗಳ ಹಿಂದಷ್ಟೇ ಹೊರಬಂದಿದ್ದ. ಈತ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬವರ ಮನೆಯಲ್ಲಿ ಕೆಲವೊಮ್ಮೆ ಉಳಿದುಕೊಳ್ಳುತ್ತಿದ್ದ. ನಿನ್ನೆ ಕೂಡ ಶಾಂತಿ ನಗರದಲ್ಲಿ ಉಳಿದುಕೊಂಡು ಮುಂಜಾನೆ 6ಗಂಟೆ ಸುಮಾರಿಗೆ ಕಾರಿನಲ್ಲಿ ತೆರಳುವ ಸಂದರ್ಭ ಮುಸುಕುಧಾರಿ ದುಷ್ಕರ್ಮಿಗಳ ತಂಡ ಆತನ ಕಾರನ್ನು ಅಡ್ಡಗಟ್ಟಿ ಬೆನ್ನಟ್ಟಿಕೊಂಡು ಬೆನ್ನಿಗೆ ಗುಂಡಿಟ್ಟು ಕೊಲೆಗೈದಿದೆ ಎನ್ನಲಾಗಿದೆ.

Get real time updates directly on you device, subscribe now.