ನಟ ಸುಶಾಂತ್ ಬಗ್ಗೆ ನಕಲಿ ಟ್ವೀಟ್: ‘ಆಜ್ ತಕ್’ಗೆ ಒಂದು ಲಕ್ಷ ರೂ .ದಂಡ

ಕ್ಷಮೆಯಾಚನೆಯ ಪದಗಳು ಹೇಗಿರಬೇಕು ಮತ್ತು ಯಾವ ದಿನದಂದು ಯಾವ ಸಮಯದಲ್ಲಿ ಕ್ಷಮೆಯಾಚನೆ ಮಾಡಬೇಕೆಂದು ಪ್ರಾಧಿಕಾರವೇ ನಿರ್ಣಯಿಸಲಿದೆ.

ಕಾರ್ಯಕ್ರಮದ ವಿಡೀಯೊಗಳು ವೆಬ್‌ಸೈಟ್, ಯೂಟ್ಯೂಬ್ ಇನ್ನಿತರ ಕಡೆ ಅಪ್ಲೋಡ್ ಮಾಡಿದ್ದರೆ ಅವುಗಳನ್ನು ತಕ್ಷಣ ತೆಗೆಯುವಂತೆ ಸೂಚಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಮುಂಬೈ: ನಟ ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿ ನಕಲಿ ಟ್ವೀಟ್‌ಗಳನ್ನು ಸಂವೇದನಾರಹಿತವಾಗಿ ಪ್ರಸಾರ ಮಾಡಿದ ‘ಆಜ್ ತಕ್’ ಸುದ್ದಿವಾಹಿನಿಗೆ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಆಥಾರಿಟಿ ಒಂದು ಲಕ್ಷ ರೂ. ದಂಡ ವಿಧಿಸಿದ್ದು, ಕ್ಷಮೆಯಾಚನೆಯನ್ನೂ ಪ್ರಸಾರ ಮಾಡುವಂತೆ ಸೂಚಿಸಿದೆ.

ಸುಶಾಂತ್ ಅವರದೆಂದು ಬಿಂಬಿಸಿ ಆಜ್ ತಕ್ ಪ್ರಸಾರದ ಸಂದರ್ಭ ಟ್ವೀಟ್‌ಗಳನ್ನು ತೋರಿಸುವ ಮೊದಲು ಸೂಕ್ತ ಪರಿಶೀಲನೆ ನಡೆಸಿಲ್ಲ. ಈ ಕಾರ್ಯಕ್ರಮದ ವಿಡೀಯೊಗಳು ವೆಬ್‌ಸೈಟ್ ಅಥವಾ ಯೂಟ್ಯೂಬ್ ಇನ್ನಿತರ ಕಡೆ ಅಪ್ಲೋಡ್ ಮಾಡಿದ್ದರೆ ಅವುಗಳನ್ನು ತಕ್ಷಣ ತೆಗೆಯುವಂತೆ ಸೂಚಿಸಲಾಗಿದೆ.

ಕ್ಷಮೆಯಾಚನೆಯ ಪದಗಳು ಹೇಗಿರಬೇಕು ಮತ್ತು ಯಾವ ದಿನದಂದು ಯಾವ ಸಮಯದಲ್ಲಿ ಕ್ಷಮೆಯಾಚನೆ ಮಾಡಬೇಕೆಂದು ಪ್ರಾಧಿಕಾರವೇ ನಿರ್ಣಯಿಸಲಿದೆ.

ಸುಶಾಂತ್ ಅವರ ಮೃತದೇಹದ ಚಿತ್ರಗಳನ್ನು ಪ್ರಸಾರ ಮಾಡಿ ನಿಯಮಾವಳಿ ಉಲ್ಲಂಘಿಸಿದ ಇಂಡಿಯಾ ಟಿವಿಗೂ ಕ್ಷಮೆ ಯಾಚನೆಗೆ ಸೂಚಿಸಲಾಗಿದೆ. ಝೀ ನ್ಯೂಸ್ ಮತ್ತು ನ್ಯೂಸ್24 ಕೂಡ ಕೆಲವು ನಿಯಮ ಉಲ್ಲಂಘನೆಗೆ ಕ್ಷಮೆ ಯಾಚನೆಗೆ ಸೂಚಿಸಲಾಗಿದೆ.

ನ್ಯೂಸ್ ನೇಶನ್ ಹಾಗೂ ಎಬಿಪಿ ನ್ಯೂಸ್ ವಾಹಿನಿಗಳಿಗೂ ಎಚ್ಚರಿಕೆ ನೀಡಲಾಗಿದೆ.

Get real time updates directly on you device, subscribe now.