ಟಿಆರ್‌ಪಿ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ; ರಿಪಬ್ಲಿಕ್ ಟಿವಿ ಮೇಲೆ ಪೊಲೀಸ್ ಕಣ್ಗಾವಲು
ಜಾಹೀರಾತು ಆದಾಯಕ್ಕಾಗಿ ಸುಳ್ಳು ಮತ್ತು ಖರೀದಿ ಮಾಡಲಾದ ಟಿಆರ್‌ಪಿಯನ್ನು ತೋರಿಸಲಾಗುತ್ತಿತ್ತು ಎಂದು ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಪತ್ರಕರ್ತರಿಗೆ ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರದ ಮೇಲೆ ನಡೆಸಿದ ದಾಳಿಯ ಬಗ್ಗೆ ರಿಪಬ್ಲಿಕ್ ಟಿವಿ ಚಾನಲ್ ಟಿಆರ್‌ಪಿ ದಂಧೆಯಲ್ಲಿ ಭಾಗಿಯಾಗಿದೆ.
ಕರಾವಳಿ ಕರ್ನಾಟಕ ವರದಿ
ಮುಂಬೈ: ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್) ತಿರುಚುವಿಕೆ ದಂಧೆ ನಡೆಯುತ್ತಿರುವುದಾಗಿ ಆರೋಪಿಸಿ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರದ ಮೇಲೆ ನಡೆಸಿದ ದಾಳಿಯ ಬಗ್ಗೆ ರಿಪಬ್ಲಿಕ್ ಟಿವಿ ಚಾನಲ್ ಟಿಆರ್‌ಪಿ ದಂಧೆಯಲ್ಲಿ ಭಾಗಿಯಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ತಿಳಿಸಿದ್ದಾರೆ.
ಯಾರು ನೋಡದೇ ಇದ್ದರೂ ಕೂಡ ಈ ಟಿವಿ ವಾಹಿನಿಗಳನ್ನು ಇಡೀ ದಿನ ಇಡುವಂತೆ ನಿರ್ದಿಷ್ಟ ಮನೆಗಳವರನ್ನು ಕೇಳಿಕೊಳ್ಳಲಾಗಿತ್ತು. ಅವರಿಗೆ ಪ್ರತೀ ತಿಂಗಳೂ 400-500ರೂ. ನೀಡಲಾಗುತ್ತಿತ್ತು. ಅನಕ್ಷರಸ್ಥರನ್ನೂ ಕೂಡ ಮನೆಯಲ್ಲಿ ಆಂಗ್ಲ ಭಾಷೆಯ ಸುದ್ದಿವಾಹಿನಿ ಇಡುವಂತೆ ಹೇಳಲಾಗಿತ್ತು. ಜಾಹೀರಾತು ಆದಾಯಕ್ಕಾಗಿ ಸುಳ್ಳು ಮತ್ತು ಖರೀದಿ ಮಾಡಲಾದ ಟಿಆರ್‌ಪಿಯನ್ನು ತೋರಿಸಲಾಗುತ್ತಿತ್ತು ಎಂದು ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಪತ್ರಕರ್ತರಿಗೆ ಹೇಳಿದ್ದಾರೆ. ರಿಪಬ್ಲಿಕ್ ಟಿವಿ ಹೆಸರು ತನಿಖೆ ಸಂದರ್ಭ ಹೊರಬಿದ್ದಿದ್ದು, ಅದರ ನಿರ್ದೇಶಕರು, ಉದ್ಯೋಗಿಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಟಿವಿ ಕಾರ್ಯಕ್ರಮಗಳ ಮತ್ತು ನಿರ್ದಿಷ್ಟ ಚಾನಲ್ ಗಳ ವೀಕ್ಷಕರ ಆಯ್ಕೆ ಮತ್ತು ಜನಪ್ರಿಯತೆಯನ್ನು ಸೂಚಿಸುವ ಟಿಆರ್‌ಪಿ ತಿರುಚುವಿಕೆ ದಂಧೆಯಲ್ಲಿ ವಾಹಿನಿ ಭಾಗಿಯಾಗಿದೆ ಮತ್ತು ಅದರಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂಬೈ ಪೊಲೀಸರ ಕ್ರೈಂ ಬ್ರ್ಯಾಂಚ್ ಎರಡು ಮರಾಠಿ ಚಾನೆಲ್‌ಗಳ ಮಾಲೀಕರನ್ನು ಬಂಧಿಸಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಚಾನೆಲ್‌ಗಳ ಬ್ಯಾಂಕ್ ಖಾತೆಗಳನ್ನೂ ಸಹ ಪರಿಶೀಲಿಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ಮುಂದುವರಿದಿದೆ.