ವಿಟ್ಲ: ಒಂಟಿ ಮಹಿಳೆಗೆ ಹಲ್ಲೆಗೈದು ದರೋಡೆ

ಲಲಿತಾ ಅವರ ಮುಖ ಮತ್ತು ಎದೆಗೆ ಗಾಯವಾಗಿದ್ದು, ಅವರನ್ನು ವಿಟ್ಲ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆಗೈದು, ಕೈಕಾಲು ಕಟ್ಟಿ ಹಾಕಿ ದರೋಡೆಗೈದ ಘಟನೆ ವಿಟ್ಲ ಮೇಗಿನಪೇಟೆಯಲ್ಲಿ ಬೆಳಿಗ್ಗೆ ನಡೆದಿದೆ.

ಲಲಿತಾ ಅವರ ಮನೆಯ ಮುಂಬಾಗಿಲಿನಿಂದ ನುಗ್ಗಿ, ಅವರಿಗೆ ಮಾರಕ ಹಲ್ಲೆಗೈದು, ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿ ಚಿನ್ನಕ್ಕಾಗಿ ಮನೆಯಲ್ಲಿ ಹುಡುಕಿದ್ದಾರೆ. ಅವರ ಕುತ್ತಿಗೆಯಲ್ಲಿನ ಸರ ಸೆಳೆದು ಪರಾರಿಯಾಗಿದ್ದಾರೆ. ಈ ಸಂದರ್ಭ ಭಾರೀ ಮಳೆ ಸುರಿಯುತ್ತಿತ್ತು ಎನ್ನಲಾಗಿದ್ದು, ಮನೆಯ ಮುಂದಿನ ಬಾಗಿಲಿಗೆ ಚಿಲಕ ಹಾಕಿದ್ದರಿಂದ ಹಿಂದಿನ ಬಾಗಿಲಿನ ಮೂಲಕ ಲಲಿತಾ ಅವರು ಬೊಬ್ಬೆ ಹೊಡೆಯುತ್ತಾ ಹೊರಬಂದಾಗ ಘಟನೆ ಸ್ಥಳೀಯರಿಗೆ ತಿಳಿದಿದೆ.

ಲಲಿತಾ ಅವರ ಮುಖ ಮತ್ತು ಎದೆಗೆ ಗಾಯವಾಗಿದ್ದು, ಅವರನ್ನು ವಿಟ್ಲ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ವಿಟ್ಲ ಎಸ್ಸೈ ವಿನೋದ್ ಕುಮಾರ್ ರೆಡ್ಡಿ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಲಲಿತಾ ಅವರ ಮನೆ ಸಮೀಪದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ.

Get real time updates directly on you device, subscribe now.