ಟಿಆರ್‌ಪಿ ತಿರುಚಿದ ಪ್ರಕರಣ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ಅರ್ನಾಬ್ ಗೋಸ್ವಾಮಿ

‘ಇಂಡಿಯಾ ಟುಡೆ’ ವರದಿಗಾರ ಮುಸ್ತಾಫ ಶೇಖ್ ಅವರನ್ನು ದೂರ ತಳ್ಳಿದ ಅರ್ನಾಬ್ ಭದ್ರತಾ ಸಿಬಂದಿ.

ಅರ್ನಾಬ್ ಗೋಸ್ವಾಮಿ ಮನೆಯಿಂದ ಹೊರ ಬರುತ್ತಿದ್ದಂತೆ ಇತರ ಸುದ್ದಿ ವಾಹಿನಿಗಳ ವರದಿಗಾರರು ಅವರನ್ನು ಬೆಂಬತ್ತಿದರು.

ಕರಾವಳಿ ಕರ್ನಾಟಕ ವರದಿ
ಮುಂಬೈ: ಟಿಆರ್‌ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ತನ್ನನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸದೇ ಕಾಲ್ಕಿತ್ತ ಘಟನೆ ವರದಿಯಾಗಿದೆ.

ಅರ್ನಾಬ್ ಗೋಸ್ವಾಮಿ ಮನೆಯಿಂದ ಹೊರ ಬರುತ್ತಿದ್ದಂತೆ ಇತರ ಸುದ್ದಿ ವಾಹಿನಿಗಳ ವರದಿಗಾರರು ಅವರನ್ನು ಬೆಂಬತ್ತಿದರು.

ಅರ್ನಾಬ್ ಅವರಿಂದ ಪ್ರತಿಕ್ರಿಯೆ ಪಡೆಯಲು ಪತ್ರಕರ್ತರು ಅವರ ಕಾರನ್ನು ಸುತ್ತುವರಿದ ಸಂದರ್ಭ ‘ಇಂಡಿಯಾ ಟುಡೆ’ ವರದಿಗಾರ ಮುಸ್ತಾಫ ಶೇಖ್ ಅವರನ್ನು ಅರ್ನಾಬ್ ಭದ್ರತಾ ಸಿಬಂದಿ ದೂರ ತಳ್ಳಿದ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದೆ.

ರಿಪಬ್ಲಿಕ್ ಟಿವಿ ಮತ್ತು ಇತರ ಎರಡು ಮರಾಠಿ ಸುದ್ದಿ ವಾಹಿನಿಗಳು ಟಿಆರ್‌ಪಿ ತಿರುಚಿದ ಬಗ್ಗೆ ಮುಂಬೈ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ಟಿ.ಆರ್.ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ ಬೆನ್ನಲ್ಲೇ ರಿಪಬ್ಲಿಕ್ ಮತ್ತು ಇಂಡಿಯಾ ಟುಡೆ ಸುದ್ದಿವಾಹಿನಿಗಳು ಆರೋಪ ಪ್ರತ್ಯಾರೋಪ ಮಾಡುತ್ತಿವೆ.

Get real time updates directly on you device, subscribe now.