ಕಾಂಗ್ರೆಸ್ ತೊರೆದ ನಟಿ ಖುಷ್ಬೂ; ಬಿಜೆಪಿ ಸೇರ್ಪಡೆ ಸಾಧ್ಯತೆ

“Few elements seated at higher level within the party, people who have no connectivity with the ground reality or public recognition are dictating terms and people like me who wanted to work for the party sincerely, are being pushed and suppressed.” 

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಅವಕಾಶ ಸಿಗಲಿಲ್ಲ. ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ ಎಂದು ಅಸಮಾಧಾನಗೊಂಡಿದ್ದರು

ಕರಾವಳಿ ಕರ್ನಾಟಕ ವರದಿ
ನವದೆಹಲಿ: ನಟಿ ಖುಷ್ಬೂ ಅವರು ಸೋಮವಾರ ಬಿಜೆಪಿ ಸೇರುವ ಸಾಧ್ಯತೆ ಇರುವುದಾಗಿ ವರದಿಯಾದ ಬೆನ್ನಲ್ಲೇ ಅವರನ್ನು ಎಐಸಿಸಿ ವಕ್ತಾರ ಸ್ಥಾನದಿಂದ ಕೈಬಿಡಲಾಗಿದ್ದು, ಆದೇಶವು ತಕ್ಷಣದಿಂದಲೇ ಅನ್ವಯವಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಖುಷ್ಬೂ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ವದಂತಿ ಹಬ್ಬಿದ್ದು, ಖುಷ್ಬೂ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರವಿವಾರ ಸಂಜೆ ತಮಿಳುನಾಡಿನಿಂದ ದೆಹಲಿಗೆ ತಲುಪಿರುವ ಖುಷ್ಬೂ ಅವರು ಕಾಂಗ್ರೆಸ್‌ನ ಎಲ್ಲ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ‘ಪಕ್ಷದಲ್ಲಿ ವಾಸ್ತವ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ ಎಂದು ಆರೋಪಿಸುವುದರ ಮೂಲಕ ಕಾಂಗ್ರೆಸ್ ಪಕ್ಷದ ಜೊತೆಗಿನ ಆರು ವರ್ಷಗಳ ನಂಟು ಮುರಿದಿದ್ದಾರೆ.

“Few elements seated at higher level within the party, people who have no connectivity with the ground reality or public recognition are dictating terms and people like me who wanted to work for the party sincerely, are being pushed and suppressed.”  ಎಂದು ಖುಷ್ಭೂ ಪಕ್ಷ ತೊರೆಯಲು ಕಾರಣವಾದ ಸಂಗತಿ ಬಗ್ಗೆ ತಮ್ಮ ಗಾಢ ಬೇಸರ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸ್ಥಾನಮಾನ ನೀಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರಿಗೂ ಕೃತಜ್ನತೆ ಸಲ್ಲಿಸಿದ್ದಾರೆ.

2014ರಲ್ಲಿ ಡಿಎಂಕೆ ತೊರೆದ ಖುಷ್ಬೂ ಸೋನಿಯಾ ಗಾಂಧಿಯವರ ಭೇಟಿಯ ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದರು. ಆದರೆ ಖುಷ್ಬೂ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಅವಕಾಶ ಸಿಗಲಿಲ್ಲ. ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ ಎಂದು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

 

Get real time updates directly on you device, subscribe now.