ಟಿಆರ್‌ಪಿ ತಿರುಚಿದ ಪ್ರಕರಣ: ರಿಪಬ್ಲಿಕ್ ಟಿವಿಯ ಹಿರಿಯ ಸಂಪಾದಕರಿಗೆ ಸಮನ್ಸ್

ತನಿಖೆಯ ಮುಂದುವರಿದ ಭಾಗವಾಗಿ ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ ಅಪರಾಧ ಗುಪ್ತಚರ ಘಟಕದ ಮುಂದೆ ಹಾಜರಾಗುವಂತೆ ಸಮನ್ಸ್.

ಕರಾವಳಿ ಕರ್ನಾಟಕ ವರದಿ
ಮುಂಬೈ: ಜಾಹೀರಾತು ಆದಾಯಕ್ಕಾಗಿ ಟಿಆರ್‌ಪಿಯನ್ನು ಮೂರು ಚಾನೆಲ್‌ಗಳು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಮುಂದುವರಿದ ಭಾಗವಾಗಿ ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ರಿಪಬ್ಲಿಕ್ ಟಿವಿಯ ಮೇಲೆಯೂ ಟಿಆರ್‌ಪಿ ತಿರುಚಿದ ಪ್ರಕರಣವಿದ್ದು, ಕಾ.ನಿ.ಸಂಪಾದಕ ನಿರಂಜನ್ ನಾರಾಯಣ ಸ್ವಾಮಿ ಮತ್ತು ಹಿರಿಯ ಕಾ.ನಿ.ಸಂಪಾದಕ ಅಭೀಷೇಕ್ ಕಪೂರ್‌ಗೆ ಮುಂಬೈ ಪೊಲೀಸರು ಬುಧವಾರ ಮಧ್ಯಾಹ್ನ ಅಪರಾಧ ಗುಪ್ತಚರ ಘಟಕದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಖಾಸಗಿ ಸಂಸ್ಥೆ ಹಂಸ ನೀಡಿದ ದೂರಿನ ಆಧಾರದಲ್ಲಿ ನಕಲಿ ಟಿಆರ್‌ಪಿ ರೇಟಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Get real time updates directly on you device, subscribe now.