ಗುಜರಾತ್: ತನಿಷ್ಕ್ ಜ್ಯುವೆಲ್ಲರಿ ಮಳಿಗೆಗೆ ದುಷ್ಕರ್ಮಿಗಳ ದಾಳಿ, ವ್ಯವಸ್ಥಾಪಕರಿಂದ ಕ್ಷಮೆಯಾಚನೆ ಪತ್ರ

ಈ ಜಾಹೀರಾತಿನ ಪರ ಸ್ವರ ಭಾಸ್ಕರ್, ಚೇತನ್ ಭಗತ್, ಶಶಿ ತರೂರ್ ಸೇರಿದಂತೆ ಅನೇಕ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ದನಿ ಎತ್ತಿದ್ದರು.

ಹಿಂದೂ ಮುಸ್ಲಿಂ ಸೌಹಾರ್ದ-ಐಕ್ಯತೆಯ ಮಹತ್ವ ಸಾರುವ ಜಾಹೀರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಕೂಗು.

ಕರಾವಳಿ ಕರ್ನಾಟಕ ವರದಿ
ಅಹ್ಮದಾಬಾದ್: ಜಾಹೀರಾತೊಂದರ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಲ್ಲಿದ್ದ ಪ್ರಸಿದ್ಧ ಜ್ಯುವೆಲ್ಲರಿ ಬ್ರಾಂಡ್ ತನಿಷ್ಕ್ ಮಳಿಗೆ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಜಾತ್ಯತೀತ ಸಂದೇಶ ಸಾರುವ ಜಾಹೀರಾತು ಪ್ರಸಾರದ ಮೂಲಕ ಹಿಂದೂಗಳ ಭಾವನೆ ನೋಯಿಸಿದ್ದಕ್ಕಾಗಿ ಕಚ್ ಜಿಲ್ಲೆಯ ಜನರ ಕ್ಷಮೆ ಯಾಚಿಸುತ್ತೇನೆ ಎಂದು ಗಾಂಧಿದಾಮ್ ತನಿಷ್ಕ್ ಚಿನ್ನಾಭರಣ ಅಂಗಡಿ ವ್ಯವಸ್ಥಾಪಕರಿಂದ ಕ್ಷಮೆಯಾಚಿಸುವ ಪತ್ರ ಬರೆಯಿಸಿಕೊಳ್ಳಲಾಗಿದೆ.

ಹಿಂದೂ ಮುಸ್ಲಿಂ ಸೌಹಾರ್ದ-ಐಕ್ಯತೆಯ ಮಹತ್ವ ಸಾರುವ ಜಾಹೀರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಿಷ್ಕಾರದ ಕೂಗು ಪ್ರಬಲವಾದ ಕಾರಣ ತನಿಷ್ಕ್ 45ಸೆಕೆಂಡ್ ಅವಧಿಯ ಜಾಹೀರಾತಿನ ವಿಡೀಯೋ ಪ್ರಸಾರ ಸ್ಥಗಿತಗೊಳಿಸಿತ್ತು. ಈ ಜಾಹೀರಾತಿನ ಪರವೂ ಅನೇಕ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ದನಿ ಎತ್ತಿದ್ದರು.

Get real time updates directly on you device, subscribe now.