‘ಲಾನಿನ’ ದುರ್ಬಲ: ಈ ಬಾರಿ ತೀವೃ ಚಳಿಗಾಲ ಸಾಧ್ಯತೆ

ಲಾನಿನ ಪರಿಸ್ಥಿತಿಯಿಂದಾಗಿ ಹವಾಮಾನ ಬದಲಾವಣೆಯಾಗುತ್ತಿದ್ದು ಚಳಿಗಾಲ ತೀವೃವಾಗಲಿದೆ.

ಈ ವರ್ಷದ ಚಳಿಗಾಲ ತೀವೃ ಶೀತದಿಂದ ಕೂಡಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ‘ಲಾನಿನ ಪರಿಸ್ಥಿತಿ ದುರ್ಬಲ’ವಾಗುತ್ತಿದ್ದು, ಈ ವರ್ಷದ ಚಳಿಗಾಲ ತೀವೃ ಶೀತದಿಂದ ಕೂಡಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ಎಲ್‌ನಿನೊ ಮತ್ತು ಲಾನಿನ ಪರಿಸ್ಥಿತಿ ವ್ಯತ್ಯಾಸದಿಂದ ಜಾಗತಿಕ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಲಾನಿನ ಪರಿಸ್ಥಿತಿ ಶೀತ ಹವಾಮಾನಕ್ಕೆ ಅನುಕೂಲಕರವಾಗಿದೆ. ಲಾನಿನ ಪರಿಸ್ಥಿತಿಯಿಂದಾಗಿ ಹವಾಮಾನ ಬದಲಾವಣೆಯಾಗುತ್ತಿದ್ದು ಚಳಿಗಾಲ ಮತ್ತಷ್ಟು ತೀವೃವಾಗಲಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯೋಜಿಸಿದ್ದ ‘ಕೋಲ್ಡ್ ವೇವ್ ರಿಸ್ಕ್ ರಿಡಕ್ಷನ್’ ವೆಬಿನಾರ್‌ನಲ್ಲಿ ಅವರು ಮಾತನಾಡುತ್ತಿದ್ದರು.

Get real time updates directly on you device, subscribe now.