‘ಮಾನಸಿಕ ಅಸ್ವಸ್ಥ’ ಹೇಳಿಕೆಗೆ ಖುಷ್ಬೂ ಕ್ಷಮೆ ಯಾಚನೆ

‘ನನಗೆ ಮೆದುಳಿಲ್ಲ. ನಾನು ನನ್ನ ಗಂಡನಿಂದ ಸುಲಭವಾಗಿ ಬ್ರೈನ್‌ವಾಶ್‌ಗೆ ಒಳಗಾಗುತ್ತೇನೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದೇನೆ. ಕ್ಷಮಿಸಿ’

ಕೋಪದ ಭರದಲ್ಲಿ, ವಿವೇಚನೆ ಕಳೆದುಕೊಂಡು ಅವಸರದಲ್ಲಿ ನೀಡಿದ ಹೇಳಿಕೆ ಕ್ಷಮೆ ಇರಲಿ. ಇನ್ನೆಂದೂ ಇಂಥಹ ಪರಿಭಾಷೆಯಲ್ಲಿ ಮಾತನಾಡಲಾರೆ ಎಂದು ಕ್ಷಮೆ ಕೋರಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಚೆನ್ನೈ: ಕಾಂಗ್ರೆಸ್ ಮಾನಸಿಕ ಅಸ್ವಸ್ಥರ ಪಕ್ಷ ಎಂದು ಬಿಜೆಪಿ ಸೇರಿದ ಬಳಿಕ ನೀಡಿದ ಹೇಳಿಕೆಗೆ ಖುಷ್ಬೂ ಕ್ಷಮೆ ಕೋರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಮನೋರೋಗಿಗಳನ್ನು ನಿಂದಿಸುವ ಅವರ ಹೇಳಿಕೆಯನ್ನು ಮಾನಸಿಕ ಆರೋಗ್ಯ ಕಾರ್ಯಕರ್ತರು ಟೀಕಿಸಿದ್ದರು.

‘ನನಗೆ ಮೆದುಳಿಲ್ಲ. ನಾನು ನನ್ನ ಗಂಡನಿಂದ ಸುಲಭವಾಗಿ ಬ್ರೈನ್‌ವಾಶ್‌ಗೆ ಒಳಗಾಗುತ್ತೇನೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದೇನೆ. ಕ್ಷಮಿಸಿ’ ಎಂದು ಖುಷ್ಬೂ ಹೇಳಿಕೆ ನೀಡಿದ್ದಾರೆ. ಕೋಪದ ಭರದಲ್ಲಿ, ವಿವೇಚನೆ ಕಳೆದುಕೊಂಡು ಅವಸರದಲ್ಲಿ ನೀಡಿದ ಹೇಳಿಕೆ ಕ್ಷಮೆ ಇರಲಿ. ಇನ್ನೆಂದೂ ಇಂಥಹ ಪರಿಭಾಷೆಯಲ್ಲಿ ಮಾತನಾಡಲಾರೆ ಎಂದು ಕ್ಷಮೆ ಕೋರಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಖುಷ್ಬೂ ನೀಡಿದ ಉತ್ತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿತ್ತು.

Get real time updates directly on you device, subscribe now.