ಮಣಿಪಾಲ: ಬ್ರೌನ್‌ಶುಗರ್ ಮಾರಲು ಯತ್ನ, ಯುವಕನ ಬಂಧನ
ಮಣಿಪಾಲ ಎಂಡ್‌ಪಾಯಿಂಟ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬ್ರಹ್ಮಾವರದ ಯುವಕ.
ಬ್ರೌನ್‌ಶುಗರ್ ಆನ್‌ಲೈನ್ ಆರ್ಡರ್ ನೀಡಿ ತರಿಸಿದ್ದು, ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ದಾಳಿ ಸಂದರ್ಭ ಪೊಲೀಸರಿಗೆ ತಿಳಿಸಿದ್ದಾನೆ.
ಕರಾವಳಿ ಕರ್ನಾಟಕ ವರದಿ
ಮಣಿಪಾಲ: ಮಣಿಪಾಲದ ಆರ್.ಟಿ.ಒ ಕಚೇರಿ ರಸ್ತೆಯ ಎಂಡ್‌ಪಾಯಿಂಟ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬ್ರಹ್ಮಾವರದ ಫಜಲ್ ಎಂದು ಗುರುತಿಸಲಾಗಿದೆ. ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಮೂವರು ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್‌ಶುಗರ್‌ನ್ನು ಆನ್‌ಲೈನ್‌ನ್ನಲ್ಲಿ ಆರ್ಡರ್ ನೀಡಿ ತರಿಸಿದ್ದು, ಅವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ದಾಳಿ ಸಂದರ್ಭ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸ್ನೇಹಿತರಾದ ಫರಾನ್ ಹಾಗೂ ಸಫಾ ಎಂಬವರಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾನೆ.
ಮಣಿಪಾಲ ಪೊಲೀಸ್ ಠಾಣಾ ಪಿ.ಐ, ಮಂಜುನಾಥ.ಎಮ್ ಅವರಿಗೆ ಆರೋಪಿ ಮಹ್ಮದ್ ಫಝಲ್ ಬ್ರಹ್ಮಾವರದಿಂದ ಮಣಿಪಾಲಕ್ಕೆ ಮಾದಕ ವಸ್ತು ಮಾರಾಟ ಮಾಡಲು ಬಂದಿರುವುದಾಗಿ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಡುಪಿ ಹಾಗೂ ಡಿ.ವೈ.ಎಸ್ಪಿ, ಉಡುಪಿ ಹಾಗೂ ಠಾಣೆಯಲ್ಲಿದ್ದ ಎ.ಎಸ್.ಪಿ, ಕುಂದಾಪುರರವರಿಗೆ ತಿಳಿಸಿದ್ದರು.
ಎಂಡ್ ಪಾಯಿಂಟ್‌ಗೆ ಎಎಸ್‌ಪಿ, ಕುಂದಾಪುರ, ಗಜೆಟೆಡ್ ಅಧಿಕಾರಿ ನಾಗರಾಜ್, ಹಾಗೂ ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ತಲುಪಿ ಫಜಲ್ ಚಲನವಲನವನ್ನು ಖಚಿತಪಡಿಸಿಕೊಂಡು ಹಿಡಿದುಕೊಂಡು ವಿಚಾರಿಸಲಾಗಿತ್ತು.
ಆತನ ಬಳಿಯಿದ್ದ 2 ಮೊಬೈಲ್‌ಪೋನ್‌ಗಳು, 54 ನಿಷೇದಿತ MDMA Ecstasy ಮಾತ್ರೆಗಳು, 30 ಗ್ರಾಂ ಬ್ರೌನ್‌ಶುಗರ್, ಆಂದಾಜು ಮೌಲ್ಯ 4,63,600 ರೂಪಾಯಗಳು ಚುನಾವಣಾ ಗುರುತು ಚೀಟಿ, ಡೆಬಿಟ್‌ಕಾರ್ಡ್‌ಗಳು-2, Department of Post Indiaರವರ Annexure A ಇಂಟಿಮೇಶನ್‌ಸ್ಲಿಪ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಆಂದಾಜು ಮೌಲ್ಯ 4,63,600/ ರೂ. ಆಗಿದೆ.
ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186/2020 ಕಲಂ: 8(c), 21(b)&(c), 22(b)&(c)NDPS Act ರಂತೆ ಪ್ರಕರಣ ದಾಖಲಾಗಿದೆ.