ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಮನೆ ಶೋಧಿಸಿದ ಬೆಂಗಳೂರು ಸಿಸಿಬಿ ಪೊಲೀಸ್
ಆದಿತ್ಯ ಆಳ್ವ, ಸಂಬಂಧಿಯಾದ ವಿವೇಕ್ ಒಬೆರಾಯ್ ಮನೆಯಲ್ಲಿರುವ ಮಾಹಿತಿ ಸಿಸಿಬಿಗೆ ಸಿಕ್ಕಿದೆ.
ನ್ಯಾಯಾಲಯದ ವಾರಂಟ್ ಪಡೆದು ಸಿಸಿಬಿ ತಂಡವನ್ನು ಒಬೆರಾಯ್ ಮನೆ ಶೋಧಕ್ಕೆ ಕಳಿಸಲಾಗಿದೆ.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವನನ್ನು ಪತ್ತೆ ಮಾಡಲು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಗೆ ಸಿಸಿಬಿ ಪೊಲೀಸ್ ತಂಡ ತೆರಳಿದೆ.
ಆದಿತ್ಯ ಆಳ್ವ, ಸಂಬಂಧಿಯಾದ ವಿವೇಕ್ ಒಬೆರಾಯ್ ಮನೆಯಲ್ಲಿರುವ ಮಾಹಿತಿ ಸಿಸಿಬಿಗೆ ಸಿಕ್ಕಿದೆ. ನ್ಯಾಯಾಲಯದ ವಾರಂಟ್ ಪಡೆದು ಸಿಸಿಬಿ ತಂಡವನ್ನು ಒಬೆರಾಯ್ ಮನೆ ಶೋಧಕ್ಕೆ ಕಳಿಸಲಾಗಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ.
ರಾಜ್ಯದ ಮಾಜಿ ಸಚಿವ ಜೀವರಾಜ್ ಆಳ್ವರ ಮಗ ಆದಿತ್ಯ ಅವರು ಕನ್ನಡ ಚಿತ್ರ ನಟರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.