ಕೋರ್ಟ್‌ನಲ್ಲಿ ತೀವೃ ಮುಜುಗರ: ದಂಡ ಸಹಿತ ಆಸ್ತಿ ತೆರಿಗೆ ಪಾವತಿಸಿದ ರಜನೀಕಾಂತ್
ಆಸ್ತಿ ತೆರಿಗೆ ಪಾವತಿ ವಿಳಂಬಕ್ಕೆ ಸಂಬಂಧಿಸಿ ‘ಗ್ರೇಟರ್ ಚೆನ್ನೈ ಕಾರ್ಪೋರೇಷನ್ ದಂಡ ವಿಧಿಸಿತ್ತು.
ಆಸ್ತಿ ತೆರಿಗೆ ಪಾವತಿಸಿದ ಬಳಿಕ ‘ಅನುಭವ ಎಂಬುದು ಪಾಠದಂತೆ’ ಎಂದು ಟ್ವೀಟ್ ಮಾಡಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಚೆನ್ನೈ: ಕಲ್ಯಾಣಮಂಟಪದ ಆಸ್ತಿ ತೆರಿಗೆ ವಿಚಾರದಲ್ಲಿ ನ್ಯಾಯಾಲಯದಲ್ಲಿ ತೀವೃ ಮುಜುಗರಕ್ಕೆ ಒಳಗಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈ ಮಹಾನಗರ ಪಾಲಿಕೆಗೆ ದಂಡ ಸಹಿತ 6.56ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸಿದರು.
ಚೆನ್ನೈಯ ಕೋಡಂಬಾಕಂನಲ್ಲಿ ರಜನಿ ಶ್ರೀ ರಾಘವೇಂದ್ರ ಎಂಬ ಕಲ್ಯಾಣ ಮಂಟಪ ಹೊಂದಿದ್ದು, ಆಸ್ತಿ ತೆರಿಗೆ ಪಾವತಿ ವಿಳಂಬಕ್ಕೆ ಸಂಬಂಧಿಸಿ ‘ಗ್ರೇಟರ್ ಚೆನ್ನೈ ಕಾರ್ಪೋರೇಷನ್ ದಂಡ ವಿಧಿಸಿತ್ತು. ರಜನಿಕಾಂತ್ ಇದರ ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ಹೋಗಿದ್ದರು.
ಅರ್ಜಿಯು ಕೋರ್ಟ್ ಸಮಯ ಹಾಳುಮಾಡುವಂಥದ್ದು ಎಂದು ಹೈಕೋರ್ಟ್ ಹೇಳಿದ್ದು, ಅರ್ಜಿ ಹಿಂಪಡೆಯದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ರಜನಿಕಾಂತ್ ತೀವೃ ಮುಜುಗರಕ್ಕೆ ಒಳಗಾಗಿದ್ದರು. ಆಸ್ತಿ ತೆರಿಗೆ ಪಾವತಿಸಿದ ಬಳಿಕ ‘ಅನುಭವ ಎಂಬುದು ಪಾಠದಂತೆ’ ಎಂದು ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯಕ್ಕೆ ಹೋಗುವ ಬದಲು ಸ್ಥಳೀಯಾಡಳಿತದೊಂದಿಗೆ ಮಾತುಕತೆ ನಡೆಸಬಹುದಿತ್ತು. ನ್ಯಾಯಾಲಯಕ್ಕೆ ಹೋಗುವುದನ್ನು ತಪ್ಪಿಸಬಹುದಿತ್ತು ಎಂದು ರಜನಿ ಹೇಳಿಕೊಂಡಿದ್ದಾರೆ.
6.50ಲಕ್ಷ ರೂ. ತೆರಿಗೆ ಮತ್ತು 9,386ರೂ. ದಂಡ ಪಾವತಿಸಿದ್ದಾರೆ.