ಮೂಡುಬಿದಿರೆ: ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಶಿಕ್ಷಕಿ ಮೃತ್ಯು

ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಶಿಕ್ಷಕಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಉಸ್ತುವಾರಿ ಸಚಿವರನ್ನು ಕೋರಿದ್ದರು.

‘ವಿದ್ಯಾಗಮ’ ಯೋಜನೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿದ್ದಾಗ ಕೋವಿಡ್ ಸೋಂಕಿತರಾದ ಮೂಡುಬಿದಿರೆ ಶಿಕ್ಷಕಿ ಪದ್ಮಾಕ್ಷಿ.

ಕರಾವಳಿ ಕರ್ನಾಟಕ ವರದಿ
ಮೂಡುಬಿದಿರೆ: ‘ವಿದ್ಯಾಗಮ’ ಯೋಜನೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿದ್ದಾಗ ಕೋವಿಡ್ ಸೋಂಕಿತರಾದ ಮೂಡುಬಿದಿರೆ ಶಿಕ್ಷಕಿ ಪದ್ಮಾಕ್ಷಿ ಇಂದು ಮೃತಪಟ್ಟಿದ್ದಾರೆ.

ತಾಯಿಯ ಚಿಕಿತ್ಸೆಗೆ ಸಹಕರಿಸುವಂತೆ ಪುತ್ರಿ ಐಶ್ವರ್ಯಾ ಅವರು ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದರು. ಐಶ್ವರ್ಯಾ ಅವರ ಫೇಸ್ ಬುಕ್ ಪೋಷ್ಠ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿದ್ಯಾಗಮ ಯೋಜನೆ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣ ದ.ಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ತಕ್ಷಣ ಎಚ್ಚತ್ತುಕೊಂಡು ಶಿಕ್ಷಕಿ ಪದ್ಮಾವತಿಯವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕಿ ಇಂದು ಸಾವಪ್ಪಿದ್ದಾರೆ.

ಎರಡನೇ ಹಂತದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಎಂದು ಕಂಡುಬಂದಿದ್ದರೂ ಪದ್ಮಾಕ್ಷಿ ಅವರ ಆರೋಗ್ಯಸ್ಥಿತಿ ಗುರುವಾರ ಮಧ್ಯಾಹ್ನ ತೀವೃ ಹದಗೆಟ್ಟಿತ್ತು. ಅವರ ಪತಿ ಶಶಿಕಾಂತ್ , ಪುತ್ರಿ ಐಶ್ವರ್ಯ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಚಿಕಿತ್ಸೆಗೆ ಒಯ್ಯಲು ಸಿದ್ಧತೆ ನಡೆಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್  ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಹಕರಿಸುವಂತೆ ಕೋರಿದ್ದರು.

 

Get real time updates directly on you device, subscribe now.