ಜಿಲ್ಲೆಯಲ್ಲಿ ಐಸಿಯು ಬೆಡ್ ಮತ್ತು ವೆಂಟಿಲೇಟರ್‌ಗೆ ತೊಂದರೆ ಆಗಿಲ್ಲ: ಜಿಲ್ಲಾಧಿಕಾರಿ ಜಗದೀಶ್

ಕಾರಿನಲ್ಲಿ ಕುಟುಂಬ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯವಲ್ಲ, ದಂಡ ಹಾಕುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಅತಿ ಕಡಿಮೆ ಸಾವಿನ ಪ್ರಮಾಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕೊರೋನಾ ಪಾಸಿಟಿವ್ ಪ್ರಮಾಣ ಇಳಿಮುಖ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಅತಿ ಕಡಿಮೆ ಸಾವಿನ ಪ್ರಮಾಣದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕೊರೋನಾ ಪಾಸಿಟಿವ್ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಜಿಲ್ಲೆಯಲ್ಲಿ ಐಸಿಯು ಬೆಡ್ ಮತ್ತು ವೆಂಟಿಲೇಟರ್‌ಗೆ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ. ಜಿಪಂ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹಿಂದಿಗಿಂತ ಮೂರು ಪಟ್ಟು ಪರೀಕ್ಷೆ ನಡೆಸುತ್ತಿದ್ದು, ಮೊದಲು ಕಂಡುಬರುತ್ತಿದ್ದ ಸರಾಸರಿ 300ರಷ್ಟು ಪ್ರಕರಣಗಳು ಪ್ರಸ್ತುತ 150ರಿಂದ 200ಕ್ಕೆ ಇಳಿದಿವೆ ಎಂದು ಡಿಸಿ ಹೇಳಿದರು. ಪಾಸಿಟಿವ್ ಬಂದವರು ಹತ್ತು ದಿನ ಹೋಮ್ ಐಸೋಲೇಷನ್‌ನಲ್ಲಿ ಇರಬೇಕಾಗುತ್ತದೆ ಮತ್ತು ಏಳು ದಿನಗಳ ರಿಪೋರ್ಟಿಂಗ್ ಅವಧಿ ಕಡ್ಡಾಯ. ಪ್ರಾಥಮಿಕ ಸಂಪರ್ಕ ಮಾಡಿದವರಿಗೆ ಏಳು ದಿನ ಹೋಂ ಕ್ವಾರಂಟೈನ್ ಮತ್ತು ಏಳು ದಿನ ರಿಪೋರ್ಟಿಂಗ್ ಅವಧಿ ಕಡ್ಡಾಯ ಮಾಡಲಾಗಿದೆ ಎಂದರು.

ಕಾರಿನಲ್ಲಿ ಕುಟುಂಬ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯವಲ್ಲ:

ಕಾರಿನಲ್ಲಿ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುವ ಸಂದರ್ಭ ಮಾಸ್ಕ್ ಕಡ್ಡಾಯವಲ್ಲ. ಕಾರಿನಿಂದ ಇಳಿಯುವ ಸಂದರ್ಭ ಮಾಸ್ಕ್ ಕಡ್ಡಾಯ ಅನ್ವಯವಾಗುತ್ತದೆ. ಬೈಕ್ ಸವಾರಿ ಮಾಡುವ ಸಂದರ್ಭ ಒಬ್ಬ ವ್ಯಕ್ತಿ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ದಂಡ ಹಾಕುವ ಸಂದರ್ಭದಲ್ಲಿ ಈ ವಿಷಯ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

 

Get real time updates directly on you device, subscribe now.