ಟ್ವೀಟ್ ಮೂಲಕ ಸೌಹಾರ್ದ ಕದಡುವ ಯತ್ನ: ಕಂಗನಾ ರಾಣಾವತ್ ವಿರುದ್ಧ ಎಫ್‌ಐಆರ್

ಕಂಗನಾ ವಿರುದ್ಧ ದೇಶದ್ರೋಹದ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕೆಂದು ದೂರು.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹಾಗೂ ಮುಂಬೈಯನ್ನು ಪಾಕ್ ಎಂದು ಕರೆದು ರಾಣಾವತ್ ಮಾಡಿದ್ದ ಟ್ವೀಟ್ ಗಳನ್ನು ನ್ಯಾಯಾಧೀಶರು ಉಲ್ಲೇಖಿಸಿದರು.

ಕರಾವಳಿ ಕರ್ನಾಟಕ ವರದಿ
ಮುಂಬೈ: ಟ್ವೀಟ್ ಗಳ ಮೂಲಕ ಹಿಂದೂ ಮತ್ತು ಮುಸ್ಲಿಂರ ನಡುವೆ ಕೋಮುಗಲಭೆ, ದ್ವೇಷ ಹರಡುವಿಕೆ ಯತ್ನಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್‌ಐಆರ್ ದಾಖಲಿಸಲು ಬಾಂದ್ರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ವೊಂದು ಮಹತ್ವದ ಆದೇಶ ನೀಡಿದೆ.

ವಿನ್ಯಾಸಕ ಹಾಗೂ ಫಿಟ್ನೆಸ್ ತರಬೇತುದಾರ ಮುನ್ನಾವರಲಿ ಸಯ್ಯದ್ ಅವರ ದೂರಿಗೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ಜಯದೇವ್ ಘುಲೆ ಈ ಆದೇಶವನ್ನು ನೀಡಿದ್ದಾರೆ.  ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹಾಗೂ ಮುಂಬೈಯನ್ನು ಪಾಕ್ ಎಂದು ಕರೆದು ರಾಣಾವತ್ ಮಾಡಿದ್ದ ಟ್ವೀಟ್ ಗಳನ್ನು ನ್ಯಾಯಾಧೀಶರು ಉಲ್ಲೇಖಿಸಿದರು.

ಐಪಿಸಿ ಸೆಕ್ಷನ್ 153 ಎ, 295 ಎ ಮತ್ತು 124ಎ ಅನ್ವಯ ದೇಶದ್ರೋಹದ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕೆಂದು ಸಯ್ಯದ್ ದೂರಿನಲ್ಲಿ ಕೋರಿದ್ದರು.

ಕಂಗನಾ ವಿರುದ್ಧ ಇತ್ತೀಚೆಗಷ್ಟೇ ರೈತರನ್ನು ನಿಂದಿಸಿದ ಟ್ವೀಟ್ ಸಂಬಂಧಿಸಿ ಕರ್ನಾಟಕದ ತುಮಕೂರಿನಲ್ಲಿ ಮೊದಲ ಎಫ್ ಐಆರ್ ದಾಖಲಾಗಿತ್ತು.

Get real time updates directly on you device, subscribe now.