ಬಂಟ್ವಾಳ: ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ

ಯುವಕನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ ಜಿಲ್ಲೆಯ ಯುವಕನನ್ನು ಗೂಡಿನಬಳಿಯ ಮೊಹ್ಮದ್ ಮತ್ತು ಅವರ ತಂಡ ರಕ್ಷಿಸಿದೆ.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಹಾಸನ ಜಿಲ್ಲೆಯ ಯುವಕನನ್ನು ಗೂಡಿನಬಳಿಯ ಮೊಹ್ಮದ್ ಮತ್ತು ಅವರ ತಂಡ ರಕ್ಷಿಸಿದೆ.

ಹಾಸನ ಜಿಲ್ಲೆಯ ಬಸ್ ಚಾಲಕ, ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಗಳೂರು-ಬೆಂಗಳೂರು ಖಾಸಗಿ ಬಸ್ ಚಾಲಕ ಕುಮಾರ್ ಎಂಬವರು ಬೆಳಿಗ್ಗೆ ಸೇತುವೆಯ ಮೇಲಿಂದ ನದಿಗೆ ಜಿಗಿದ ಮಾಹಿತಿ ದೊರೆತೊಡನೆ ಮೊಹ್ಮದ್ ದೋಣಿ ಮೂಲಕ ಯುವಕನನ್ನು ತಲುಪಿ ನದಿಯಿಂದ ಮೇಲಕ್ಕೆತ್ತಿ ಜೀವ ರಕ್ಷಿಸಿದ್ದಾರೆ. ಮೊಹ್ಮದ್ ಅವರಿಗೆ ಶಿಹಾಬ್ ಮತ್ತು ಸ್ವಾಲಿಹ್ ಎಂಬವರು ಸಹಕರಿಸಿದ್ದರು.

ಯುವಕನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Get real time updates directly on you device, subscribe now.