ಸುಳ್ಯ: ವಸತಿಗೃಹದಲ್ಲಿ ಯುವಕ-ಯುವತಿ ಆತ್ಮಹತ್ಯೆ

ವಸತಿಗೃಹದಲ್ಲಿ ಊರಿಗೆ ಹೋಗುವ ಬಸ್ ಇಲ್ಲ ಎಂದು ಹೇಳಿ ಕೋಣೆ ಪಡೆದುಕೊಂಡಿದ್ದರು.

ಅ.19ರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಕರಾವಳಿ ಕರ್ನಾಟಕ ವರದಿ
ಸುಳ್ಯ: ನಗರದ ವಸತಿಗೃಹವೊಂದರಲ್ಲಿ ಐವರ್ನಾಡಿನ ಯುವಕ ಮತ್ತು ಬೆಳ್ತಂಗಡಿಯ ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಕಳವಳಕಾರಿ ಸಂಗತಿ ವರದಿಯಾಗಿದೆ.

ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಮಗ ದರ್ಶನ್(19) ಮತ್ತು ಬೆಳ್ತಂಗಡಿಯ ಧರ್ಮಸ್ಥಳ ಸಮೀಪದ ನಾರ್ಯ ಕಲ್ಕಜೆ ನಿವಾಸಿ ಶೇಷಪ್ಪ ಎಂಬವರ ಮಗಳು ಇಂದಿರಾ(19) ಎಂದು ಮೃತರನ್ನು ಗುರುತಿಸಲಾಗಿದೆ. ಒಂದೇ ನೇಣಿಗೆ ಇಬ್ಬರೂ ಕೊರಳೊಡ್ಡಿ ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಅ.18ರಂದು ವಸತಿಗೃಹದಲ್ಲಿ ಊರಿಗೆ ಹೋಗುವ ಬಸ್ ಇಲ್ಲ ಎಂದು ಹೇಳಿ ಯುವತಿಯ ದಾಖಲೆ ನೀಡಿ ಕೋಣೆ ಪಡೆದುಕೊಂಡಿದ್ದರು. ಅ.19ರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

 

Get real time updates directly on you device, subscribe now.