ಸಿಎ‌ಎ ಶೀಘ್ರ ಜಾರಿಗೆ ಕ್ರಮ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ

ಸಿಎ‌ಎ ಅನುಷ್ಟಾನಕ್ಕೆ ಪಕ್ಷ ಬದ್ದವಾಗಿದೆ. ಕೋವಿಡ್‌19 ಕಾರಣದಿಂದ ಸಿಎ‌ಎ ಜಾರಿ ವಿಳಂಬ.

ಪೌರತ್ವ ತಿದ್ದುಪಡಿ ಕಾಯ್ದೆ ನಿಯಮ ರೂಪಿಸಲು ಇನ್ನೂ ಮೂರು ತಿಂಗಳು ಬೇಕು ಎಂದು ಗೃಹ ಸಚಿವಾಲಯ ಸಂಸದೀಯ ಸ್ಥಾಯಿ ಸಮಿತಿಗೆ ಆಗಸ್ಟ್‌ನಲ್ಲಿ ತಿಳಿಸಿದೆ.

ಕರಾವಳಿ ಕರ್ನಾಟಕ ವರದಿ
ಸಿಲಿಗುರಿ: ಪೌರತ್ವ (ತಿದ್ದುಪಡಿ) ಕಾಯ್ದೆ ‘ಸಿ‌ಎ‌ಎ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಸಿಎ‌ಎ ಅನುಷ್ಟಾನಕ್ಕೆ ಪಕ್ಷ ಬದ್ದವಾಗಿದೆ. ಕೋವಿಡ್‌19 ಕಾರಣದಿಂದ ಸಿಎ‌ಎ ಜಾರಿ ವಿಳಂಬವಾಗಿತ್ತು ಎಂದು ಸಿಲಿಗುರಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ನಡ್ಡಾ ಹೇಳಿದರು.

ಮಮತಾ ಬ್ಯಾನರ್ಜಿ ಸರಕಾರ ರಾಜಕೀಯ ಹಿತಾಸಕ್ತಿಗೋಸ್ಕರ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ನಡ್ಡಾ ಆರೋಪಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ನಿಯಮ ರೂಪಿಸಲು ಇನ್ನೂ ಮೂರು ತಿಂಗಳು ಬೇಕು ಎಂದು ಗೃಹ ಸಚಿವಾಲಯ ಸಂಸದೀಯ ಸ್ಥಾಯಿ ಸಮಿತಿಗೆ ಆಗಸ್ಟ್‌ನಲ್ಲಿ ತಿಳಿಸಿದೆ.

ಸಂಸತ್ ಅಂಗೀಕರಿಸಿದ ಸಿ‌‌ಎ‌ಎ ಕಾಯ್ದೆ ಅನ್ವಯ ಡಿ.14, 2014ರ ಮುನ್ನ ಪಾಕಿಸ್ತಾನ, ಬಾಂಗ್ಲಾ ದೇಶ, ಅಪಘಾನಿಸ್ತಾನದಿಂದ ಬಂದಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವ ಸಿಗುತ್ತದೆ.

Get real time updates directly on you device, subscribe now.